22.5 C
ಪುತ್ತೂರು, ಬೆಳ್ತಂಗಡಿ
December 18, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ: ಕನ್ನಡ ಫಿಲಂ ಚೇಂಬರ್ ಕಮಿಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ರವರನ್ನು ಆಯ್ಕೆ ಮಾಡಲಾಗಿದೆ .

ಡಿ. 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಇಡೀ ರಾಜ್ಯಮಟ್ಟದಲ್ಲಿ ತನ್ನದೇ ಆದ ಹೊಸ ಹೊಸ ಯೋಜನೆಗಳ ಮುಖಾಂತರ ಯುವ ಜನರಿಗೆ ಸ್ಪೂರ್ತಿದಾಯಕ ಕೆಲಸಗಳೊಂದಿಗೆ ತನ್ನದೇ ಆದ ವಿಶಿಷ್ಟ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಬೆಳ್ತಂಗಡಿಯ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇವರ ಮಾದರಿಯುತವಾದ ರಕ್ತದಾನ, ಸ್ವಚ್ಛಾಲಯ, ಸರಕಾರಿ ಶಾಲೆ, ಉಳಿಸಿ ಬೆಳೆಸಿ, ಸ್ವಚ್ಛತಾ ಕಾರ್ಯಕ್ರಮ, ಶೈಕ್ಷಣಿಕ ಕ್ರೀಡೆ ಶಿಕ್ಷಣ ಹಾಗೂ ಹಲವಾರು ಕಾರ್ಯಕ್ರಮಗಳೊಂದಿಗೆ ರಾಜ್ಯದ ಜನತೆಯ ಸೇವೆಗಾಗಿ ಮುಡಿಪಾಗಿಟ್ಟಿರುವಂತಹ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ಇದರ ಸಂಸ್ಥಾಪಕದ ದೀಪಕ್ ಜಿ ಬೆಳ್ತಂಗಡಿ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಫಿಲಂ ಚೇಂಬರ್ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ ಎಸ್ ರವೀಂದ್ರ ಅವರು ತಿಳಿಸಿದ್ದಾರೆ.

Related posts

ಉಜಿರೆ: ಎಸ್.ಡಿ.ಟಿ.ಯು ಚಾಲಕ ಹಾಗೂ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಡಿ.7 ಧರ್ಮಸ್ಥಳದಲ್ಲಿ ಪದಾಧಿಕಾರಿಗಳ ಸಹಮಿಲನ ಹಾಗೂ ವ್ಯಸನ ಮುಕ್ತರ ಕುಟುಂಬೋತ್ಸವ

Suddi Udaya

ಉಜಿರೆ : ಬೆನಕ ಹೆಲ್ತ್ ಸೆಂಟರ್ ನಲ್ಲಿ ಯಶಸ್ವಿನಿ ಯೋಜನೆಯಲ್ಲಿ ಯಶಸ್ವಿ ಮೊಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀರಾಮ ಪ್ರೌಢ ಶಾಲೆಯ ಬಾಲಕ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಮಡವು ಸ್ವರ್ಣ ಸಂಜೀವಿನಿ ಟ್ರಸ್ಟ್ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ ಗೋಪೂಜೆ ಮತ್ತು ಗೊಗ್ರಾಸಕ್ಕೆ ನಗದು ಹಸ್ತಾಂತರ

Suddi Udaya
error: Content is protected !!