ಬೆಳ್ತಂಗಡಿ: ತುಳುನಾಡಿನಲ್ಲಿ ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಮೇಲಾಗುತ್ತಿದ್ದ ದಬ್ಬಾಳಿಕೆ, ದೌರ್ಜನ್ಯದ ಕಥಾನಕವನ್ನೇ ಪೋಣಿಸಿ ಸಿದ್ದಪಡಿಸಿದ ಹಾಗೂ ತುಳು ಸಿನೆಮಾ ರಂಗದಲ್ಲಿ ಹೊಸ ಪ್ರಯೋಗವನ್ನು ಬರೆದ ‘ದಸ್ಕತ್’ ಸಿನೆಮಾ ಕರಾವಳಿಯ ಥಿಯೇಟರ್‌ಗಳಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಪಂಚಾಯತ್ ಅಧಿಕಾರಿಯೊಬ್ಬನ ದಸ್ತತ್‌ಗಾಗಿ ಜನರ ಪಾಡನ್ನು ವಿಭಿನ್ನ ನೆಲೆಯಿಂದ ಮೂಡಿಸಿದ ಸಿನೆಮಾ, ತುಳುನಾಡಿನ ಗ್ರಾಮೀಣ ಬದುಕಿನ ಸಂಕಟದ ಕಥಾನಕವನ್ನು ಪ್ರದರ್ಶಿಸಿದೆ. ಆರಂಭದಿಂದ ಕೊನೆಯವರೆಗೂ ಹಲವು ತಿರುವುಗಳೊಂದಿಗೆ ಸಾಗುವ ಈ ಸಿನಿಮಾ, ಬಿಡುಗಡೆಯಾದ ಮೊದಲ ದಿನವೇ ಯಶಸ್ವಿ ಪ್ರದರ್ಶನದ ಮೂಲಕ ಗಮನ ಸೆಳೆದಿದೆ.
ಚಿತ್ರದ ಬಿಡುಗಡೆ ಸಮಾರಂಭವು ಬಿಗ್ ಸಿನೆಮಾಸ್‌ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಬೆಳ್ತಂಗಡಿ ಚಿತ್ರಮಂದಿರದಲ್ಲಿ
ಡಿ.13 ರಂದು ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಪ್ರಮುಖರಾದ ರಾಘವೇಂದ್ರ ಕುಡ್ವ ಜಗದೀಶ್ ಅಧಿಕಾರಿ,ಜಯಂತ್ ಕೋಟ್ಯಾನ್ ಮರೋಡಿ, ಪ್ರಶಾಂತ್ ಎಂ ಪಾರೆಂಕಿ,ರತ್ನಾಕರ ಬುಣ್ಣನ್,ಜಗನ್ನಾಥ ಶೆಟ್ಟಿ,ಕಲಾವಿದ ಹಿತೇಶ್ ಕಾಪಿನಡ್ಕ, ಉಮೇಶ್ ಕುಲಾಲ್,ಚಂದ್ರ ಮೇಲಂತಬೆಟ್ಟು,ಬಾಲಕೃಷ್ಣ ಶೆಟ್ಟಿ ತೆಂಕಕಾರಂದೂರು, ವಿನಯಚ್ಚಂದ್ರ ಕೆನಾರ ಸ್ಟೈನ್ ಲೆಸ್,ಸೂರಜ್ ಕಲ್ಯ, ಬಿ.ಎಸ್ ಕುಲಾಲ್,ತುಕರಾಮ್ ಬಿ, ಸಂತೋಷ್ ಪಿ ಕೋಟ್ಯಾನ್ ಬಳಂಜ,ಕೊರಗಪ್ಪ,ವಿನೋದ್ ರಾಜ್, ಅನೀಶ್ ಪೂಜಾರಿ, ಸ್ಮಿತೇಶ್ ಬಾರ್ಯ,ಸಮರ್ಥನ್ ರಾವ್,ಜಗದೀಶ್ ಕನ್ನಾಜೆ, ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಚಿತ್ರದ ನಟ-ನಟಿಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರು, ಕಲಾವಿದರನ್ನು,ತಂಡದ ಸದಸ್ಯರನ್ನು ಗೌರವಿಸಲಾಯಿತು.