ಬೆಳ್ತಂಗಡಿ : ಬಿಎಂಎಸ್ ರಿಕ್ಷಾ ಚಾಲಕ ಸಂಘ ಬೆಳ್ತಂಗಡಿ ತಾಲೂಕು ಇದರ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಯೋಜನೆ ಯ 25ನೇ ಸಹಾಯಧನವನ್ನು ಇತ್ತೀಚಿಗೆ ಮೃತರಾಗಿರುವ ಬಾಬು ಪೂಜಾರಿಯವರ ಪತ್ನಿ ಪ್ರೇಮ ಅವರಿಗೆ ರೂ. 10,000 ವನ್ನು ಹಸ್ತಾಂತರಿಸಲಾಯಿತು.
ಸಹಾಯಧನವನ್ನು ಬಾಬು ಪೂಜಾರಿಯವರ ಹೆಸರಿನಲ್ಲಿ ಪೊಯ್ಯೆ ಗುಡ್ಡೆ ರಿಕ್ಷಾ ಚಾಲಕ ಸಂಘ ನಿರ್ಮಿಸಲು ಉದ್ದೇಶಿಸಿರುವ ಬಸ್ ಸ್ಟ್ಯಾಂಡಿಗೆ ಬಳಸಲು ಪೊಯ್ಯೆಗುಡ್ಡೆ ರಿಕ್ಷಾ ಚಾಲಕ ಸಂಘಕ್ಕೆ ಅವರು ಹಸ್ತಾಂತರಿಸಿರುತ್ತಾರೆ.
ಈ ಸಂದರ್ಭದಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಸಂಘದ ಕೋಶಾಧಿಕಾರಿ ಪ್ರಶಾಂತ್ ಗರ್ಡಾಡಿ ,ಪೊಯ್ಯೆಗುಡ್ಡೆ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ಸುಕೇಶ್ ಕುಮಾರ್, ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೋಶಾಧಿಕಾರಿ ಹರೀಶ್ ಮೂಲ್ಯ ಹಾಗೂ ಸದಸ್ಯರಾದ ಶಿವಪ್ಪ ಮೂಲ್ಯ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.