ನಿಡ್ಲೆ: ಬರೆಂಗಾಯ ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. 27 , 28 ರಂದು ನಡೆಯಲಿರುವ ಅಮೃತ ಮಹೋತ್ಸವ ಪ್ರಯುಕ್ತ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ವಿವಿಧ ಆಟೋಟ ಸ್ಪರ್ಧೆಗಳು ಡಿ.15 ರಂದು ನಡೆಯಿತು.
ಕ್ರೀಡಾ ಸಮಿತಿಯ ಸಂಚಾಲಕ ಆನಂದಕೃಷ್ಣ ನೂಜಿಲ ಇವರು ದೀಪಪ್ರಜ್ವಲನೆಗೊಳಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಕುಂತಲಾ ಜೆ ಶೆಟ್ಟಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ ಗೌಡ, ಶ್ರೀಮತಿ ರಮಣಿ, ಕ್ರೀಡಾ ಸಮಿತಿ ಸದಸ್ಯೆ ಶ್ರೀಮತಿ ಗಾಯತ್ರಿ, ಬಾಲಕೃಷ್ಣ ಗೌಡ ಅಲಕ್ಕೆ, ಅಮೃತ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಕೃಷ್ಣಕುಮಾರ್ ಕಾಟ್ಲ, ಪೆರಿಂಜೆ ಅಧ್ಯಾಪಕ ಶ್ರೀಧರ್ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಸ್ವಾಗತಿಸಿದರು. ಶಿಕ್ಷಕ ಸ್ವಾಮಿ ಹೆಚ್.ಎಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸತೀಶ್ ಆಚಾರ್ ಧನ್ಯವಾದವಿತ್ತರು.
ನಂತರ ಹಿರಿಯ ವಿದ್ಯಾರ್ಥಿ ಹಾಗೂ ಊರವರಿಗೆ ಆಟೋಟ ಸ್ಪರ್ಧೆಗಳು ನಡೆಯಿತು. ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಸದಾನಂದ, ಪರಮೇಶ್ವರ್, ಕ್ರೀಡಾ ಸಮಿತಿ ಸದಸ್ಯರಾದ ಶ್ರೀನಿವಾಸ್, ಡೀಕಯ್ಯ ಬರೆಂಗಾಯ, ಮನೋಜ್ ಬಿ. ಕೆ. , ಅಕ್ಷತ್, ಪ್ರತ್ಯುಶ್ ಸಹಕರಿಸಿದರು. ಕ್ರೀಡಾಸಮಿತಿಯ ಸದಸ್ಯ ರಂಜಿತ್ ಜಿ.ಪಿ.ಟಿ. ಶಿಕ್ಷಕರು, ಚಂದ್ರಯ್ಯ, ಉಪಸ್ಥಿತರಿದ್ದರು. ಕ್ರೀಡಾ ಕೂಟದ ಯಶಸ್ವಿಗೆ ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಹೆಬ್ಬಾರ್ ಹಾಗೂ ಸದಸ್ಯರು, ಅಮೃತ ಮಹೋತ್ಸವ ಸಮಿತಿಯವರು, ಊರವರು ಸಹಕರಿಸಿದರು.