September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅವಾಚ್ಯವಾಗಿ ಬೈದು ಹಲ್ಲೆ ,ದೈಹಿಕ ಹಿಂಸೆ ಆರೋಪ: ಪತಿಯ ವಿರುದ್ಧ ಪತ್ನಿ ವೇಣೂರು ಪೊಲೀಸ್ ಠಾಣೆಗೆ ದೂರು

ಮೂಡುಕೋಡಿ : ಇಲ್ಲಿಯ ಶಿವಕೃಪಾ ಎಂಬಲ್ಲಿ ನವೀನ್ ಎಂಬಾತನು ತನ್ನ ಪತ್ನಿ ಭಾಗ್ಯ ರವರಿಗೆ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ.16 ರಂದು ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಭಾಗ್ಯ ರವರು ಸುಮಾರು 16 ವರ್ಷಗಳ ಹಿಂದೆ ನವೀನ್ ರವನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇರುತ್ತಾರೆ, ನವೀನ್ ಮದುವೆಯಾಗಿ ಸುಮಾರು 5 ವರ್ಷ ಅನ್ಯೋನ್ಯವಾಗಿದ್ದು ನಂತರ ವಿಪರೀತ ಮದ್ಯ ಸೇವಿಸುವ ಚಟಹೊಂದಿ ವಿನಾ: ಕಾರಣ ಆಗಾಗ ಕ್ಷುಲ್ಲಕ ವಿಚಾರದಲ್ಲಿ ಮಾತಿನ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಡಿ.15 ರಂದು ರಾತ್ರಿ ಆಪಾದಿತನು ತನ್ನ ಮನೆಯಾದ ಮೂಡುಕೋಡಿ ಗ್ರಾಮದ ಶಿವಕೃಪಾ ಎಂಬಲ್ಲಿ ಭಾಗ್ಯ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿದೆ ಎಂದು ಭಾಗ್ಯ ರವರು ದೂರಿದ್ದಾರೆ.

    Related posts

    ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಬಿ. ಪದ್ಮನಾಭ ಸಾಲ್ಯಾನ್ ನೇಮಕ

    Suddi Udaya

    ಪೆರಿಂಜೆ ಪಡ್ಡoದಡ್ಕ ನಿವಾಸಿ ಸಫೀಯಾ ನಿಧನ

    Suddi Udaya

    ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ಬಳಂಜ ಶಾಲೆಗೆ ಕಂಪ್ಯೂಟರ್ ಕೊಡುಗೆ

    Suddi Udaya

    ಕವನ ವಾಚನ ಸ್ಪರ್ಧೆ: ಎಲ್ ಸಿ ಆರ್ ಪದವಿ ಕಾಲೇಜು ವಿದ್ಯಾರ್ಥಿನಿ ನವ್ಯ ದ್ವಿತೀಯ ಸ್ಥಾನ

    Suddi Udaya

    ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

    Suddi Udaya

    ‘ಕಬ್ಜಾ’ ಶರಣ್ ತಂಡದಿಂದ ಸೌಜನ್ಯ’ ನ್ಯಾಯಕ್ಕಾಗಿ ಪಾದಯಾತ್ರೆ: ಧರ್ಮಸ್ಥಳ ಪ್ರವೇಶ ದ್ವಾರದಲ್ಲಿ ‘ಕಬ್ಜಾ’ ಶರಣ್ ತಂಡಕ್ಕೆ ಗ್ರಾಮಸ್ಥರ ತಡೆ: ಮಾತಿನ ಚಕಮಕಿ

    Suddi Udaya
    error: Content is protected !!