ಪುಂಜಾಲಕಟ್ಟೆ : ಇಲ್ಲಿಯ ಮಧ್ವ ಯಕ್ಷಕೂಟ ಇದರ ಮಧ್ವ ಪ್ಯಾಲೆಸ್ ವಠಾರದಲ್ಲಿ ನಡೆದ ೫ ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಾರಿಂಜದ ಗ್ರಾಮಣಿ ಗಣಪತಿ ಮುಚ್ಚಿನ್ನಾಯ ಉದ್ಘಾಟಿಸಿ, ಮಧ್ವಾಚಾರ್ಯರು ವಿಶ್ರಮಿಸಿದ ಸ್ಥಳವಾದ ಮಧ್ವದಲ್ಲಿ ಯಕ್ಷಗಾನ ಸೇವೆ ನಡೆಸುತ್ತಿರುವುದು ಉತ್ತಮ ಕಾರ್ಯ ಹೇಳಿದರು.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ ಶೆಣೈ ಅವರು ಮಾತನಾಡಿ, ವೇದಸಾರವನ್ನು ಹೊಂದಿರುವ ಯಕ್ಷಗಾನ ದೇವರಿಗೆ ಪ್ರಿಯವಾಗಿದ್ದು, ಧಾರ್ಮಿಕ ಚಿಂತನೆಯ ಜತೆ ನೈತಿಕ ಮೌಲ್ಯಗಳನ್ನು ತಿಳಿಸುವ ಮಾಧ್ಯಮವಾಗಿದೆ ಎಂದು ಹೇಳಿದರು. ಬಳ್ಳಮಂಜ ಉದ್ಯಮಿ ಜಯಪ್ರಕಾಶ್ ಸಂಪಿಗೆತ್ತಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಮಾಜಿ ಆಡಳಿತ ಮೊಕೇಸ್ತರ ರತ್ನಾಕರ ಶೆಟ್ಟಿ ಮೂಡಾಯೂರು, ಮಧ್ವಕಟ್ಟೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್,ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಪ್ರಮುಖರಾದ ಬಿ.ಪದ್ಮಶೇಖರ್ ಜೈನ್, ಲಕ್ಷ್ಮೀನಾರಾಯಣ ಶರ್ಮ, ಭವಾನಿ ಶ್ರೀಧರ್, ವೀರೇಂದ್ರ ಅಮೀನ್, ರುಕ್ಮಯ್ಯ ಗೌಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳ್ಳಿ ಪದಕ ಪುರಸ್ಕೃತ ಚಾಲಕ ಜಯಪ್ರಕಾಶ್ ರಾವ್ ಕಾವಳಕಟ್ಟೆ,ಬೆಂಗಳೂರು ಪೊಲೀಸ್ ಅಧಿಕಾರಿ ಶಾಂತಾರಾಮ,ಮಂಗಳೂರು ಅಂಚೆ ಇಲಾಖೆ ಅಧಿಕಾರಿ ಮುಸ್ತಾಕ್ ಹುಸೇನ್,ಯಕ್ಷಗಾನ ಹಿರಿಯ ಅರ್ಥಧಾರಿ ಡಿ.ಪಾತಿಲ ತಿಮ್ಮಪ್ಪ ಶೆಟ್ಟಿ,ಕಾರಿಂಜ ಯಕ್ಷಾವ್ಯಾಸಂ ಸಂಚಾಲಕಿ ಸಾಯಿಸುಮಾ ಎಂ.ನಾವಡ, ಜೀವ ರಕ್ಷಕ ಪ್ರಶಸ್ತಿಯ ಅಂಬ್ಯುಲೆನ್ಸ್ ಚಾಲಕ ಸುನಿಲ್ ಮಿನೇಜಸ್ ಅವರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಧ್ವ ಸ್ವಾಗತಿಸಿದರು. ಉಪಾಧ್ಯಕ್ಷ ನಾರಾಯಣ ಶೆಟ್ಟಿವಂದಿಸಿದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಸಂಜೆ ಶ್ರೀ ಮಧ್ವ ಸಂಕೀರ್ತನಾ ಬಳಗದಿಂದ ಭಜನಾ ಸಂಕೀರ್ತನೆ ರಾತ್ರಿ ಕದಂಬ ಕೌಶಿಕ ಯಕ್ಷಗಾನ ಪ್ರದರ್ಶನಗೊಂಡಿತು.