24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗೋ ವಧೆ ಮಾಫಿಯಾದವರನ್ನು ಮಟ್ಟಹಾಕಿ ಜೈಲಿಗಟ್ಟಲು ವಿಶ್ವ ಹಿಂದೂ ಪರಿಷತ್ ಆಗ್ರಹ

ಬೆಳ್ತಂಗಡಿಯ ಚಾರ್ಮಾಡಿ ಮೃತ್ಯುಂಜಯ ಹೊಳೆಯ ಅನ್ನಾರು ಎಂಬಲ್ಲಿ ದನದ ತಲೆ, ಚರ್ಮ ಇತ್ಯಾದಿ ತ್ಯಾಜ್ಯಗಳನ್ನು ತುಂಬಿಸಿದ ಹಲವು ಗೋಣಿಚೀಲಗಳನ್ನು ಮೃತ್ಯುಂಜಯ ನದಿಗೆ ಎಸೆದದ್ದು ಕಂಡುಬಂದಿದೆ. ಇದೇ ರೀತಿ ಹಲವು ಸಮಯದಿಂದ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ನವೀನ್ ನೆರಿಯ ಹೇಳಿದರು.

ಅವರು ಡಿ.18 ರಂದು ಬೆಳ್ತಂಗಡಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಜಾರಿಯಲ್ಲಿದ್ದು ಗೋ ಹತ್ಯೆಗೆ ಏಳು ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿವರೆಗೆ ದಂಡ ಇದೆ. ನಮಗೆ ಸಿಕ್ಕಿದ ಮಾಹಿತಿಯಂತೆ ಚಾರ್ಮಾಡಿಯ ಆಸುಪಾಸಿನಲ್ಲಿ ಈ ಕಾಯ್ದೆ ಉಲ್ಲಂಘಿಸಿ ಗೋಮಾಂಸ ಮಾಡುವ ಬೃಹತ್ ಮಾಫಿಯಾ ಕಾರ್ಯವಸ ಗೊತ್ತಿದ್ದು ಆಸುಪಾಸಿನಲ್ಲಿ ಅಕ್ರಮ ಕಸಾಯಿ ಖಾನೆಗಳಲ್ಲಿ ಗೋವದೆ ಮಾಡಿ ಗೋಮಾಂಸವನ್ನ ಬೆಳ್ತಂಗಡಿ ಪುತ್ತೂರು ಮಂಗಳೂರು ಕಡೆ ಮಾರಾಟ ಮಾಡಲಾಗುತ್ತಿದೆ.

ಅಕ್ರಮ ಕಸಾಯಿ ಖಾನೆಗೆ ಗೋವುಗಳ ಅಕ್ರಮ ಸಾಗಾಟ, ಅಕ್ರಮ ವಧೆ, ಗೋಮಾಂಸ ಸಾಗಾಟ ಗೋಮಾಂಸ ಮಾರಾಟ ಎಲ್ಲವನ್ನು ನಿಲ್ಲಿಸಲು ಕಾನೂನಿನಲ್ಲಿ ಅವಕಾಶ ಇದ್ದು ಪೊಲೀಸ್ ಇಲಾಖೆಯ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಆದ್ದರಿಂದ ಸಾಧ್ಯ ಇರುವ ಎಲ್ಲಾ ಕಡೆಗಳಲ್ಲಿ ಪೊಲೀಸರು ಧಾಳಿ ಮಾಡಿ ಅಕ್ರಮ ಸಾಗಾಟ ವಧಸ್ಥಳ ಗೋಮಾಂಸ ಸಾಗಾಟ ಮಾರಾಟಗಳನ್ನು ನಿಲ್ಲಿಸಲು ವಿಶೇಷ ಪೊಲೀಸ್ ಪಡೆ ರಚಿಸಬೇಕು. ಇದರ ಹಿಂದೆ ದೊಡ್ಡ ಮಾಫಿಯಾ ಇನ್ನು ಮಾಫಿಯಾದ ಜನರನ್ನು ಹಿಡಿದು ಜೈಲಿಗಟ್ಟಬೇಕು ವಧೆ ಮಾಡಿದ ಸ್ಥಳ ಗೋಸಾಗಾಟ ಮಾಡಿದ ವಾಹನಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಬೇಕು. ಆರೋಪಿಗಳನ್ನು ಸ್ಟೇಷನ್ ಜಾಮಿನಲ್ಲಿ ಬಿಡದೆ ಪೊಲೀಸ್ ಕಸ್ಟಡಿಗೆ “ತೆಗೆದುಕೊಂಡು ಮಾಂಸ ಎಲ್ಲೆಲ್ಲಿ ಮಾರಾಟವಾಗುತ್ತಿದೆ, ಗೋವುಗಳನ್ನು ಎಲ್ಲಿಂದ ತರಲಾಗಿದೆ’ ಎಂಬಿತ್ಯಾದಿ ಬಗ್ಗೆ ಸರಿಯಾಗಿ ವಿಚಾರಿಣೆ ನಡೆಸಿ ಗೋವದೆ ಪೂರ್ತಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಧರ್ಮಸ್ಥಳ ಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರ

ಹೊಳೆಗೆ ಗೋಮಾಂಸ ತ್ಯಾಜ್ಯಗಳನ್ನು ಹಾಕಿದರೆ ಅದು ಧರ್ಮಸ್ಥಳದ ಸ್ನಾನಘಟ್ಟಕ್ಕೆ ಬರುವುದರಿಂದ ಅಲ್ಲಿ ಸಾವಿರಾರು ಹಿಂದುಗಳು ಪವಿತ್ರ ಸ್ನಾನ ಮಾಡುವಾಗ ನೀರನ್ನು ಅಪವಿತ್ರ ಗೊಳಿಸುವ ಹೊನ್ನಾರ ಇದು ಆಗಿರಬೇಕೆಂದು ಕಾಣುತ್ತಿದೆ, ಆದ್ದರಿಂದ ಯಾವುದೇ ರೀತಿಯಲ್ಲಿ ಸ್ನಾನಘಟ್ಟ, ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲಾ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್‌ ಆಗ್ರಹಿಸುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಘಟಕ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಸಂಚಾಲಕ ಸಂತೋಷ್ ಅತ್ತಾಜೆ, ಗೋರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

Related posts

ಕೊಯ್ಯೂರು: ದೇವಸ ಬಾಬು ಗೌಡ ನಿಧನ

Suddi Udaya

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya

ದೈವ ನರ್ತಕ ಸಮುದಾಯದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ಹಾಗೂ ಅಶ್ಲೀಲವಾಗಿ ನಿಂದಿಸಿದರ ವಿರುದ್ಧ ಅಟ್ರಸಿಟಿ ಕೇಸ್ ದಾಖಲಿಸುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ: ತಾಲೂಕು ಮಟ್ಟದ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಣೆ -‌ಮೆರವಣಿಗೆ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಬಟ್ಲಡ್ಕ ಯುನಿಟ್ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!