ಬಂಗಾಡಿ: ಇಂದಬೆಟ್ಟು, ನಾವೂರು, ಕನ್ಯಾಡಿ, ಮಲವಂತಿಗೆ, ಮಿತ್ತಬಾಗಿಲು ಮತ್ತು ಕಡಿರುದ್ಯಾವರ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಮುಂದಿನ 2025 ರಿಂದ 30ರವರೆಗಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್, ಹಾಗೂ ಉಪಾಧ್ಯಕ್ಷರಾಗಿ ಆನಂದ ಗೌಡ ಬಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾದ ವಸಂತ ಗೌಡ , ವಿನಯಚಂದ್ರ, ಹರೀಶ್ ಪೂಜಾರಿ , ಪ್ರಮೋದ್ ಕುಮಾರ್ , ರಮೇಶ್ ಕೆಂಗಾಜೆ, ಶೀನಪ್ಪ ಗೌಡ, ಪುಷ್ಪಲತಾ ಕೆ., ವೇದಾವತಿ , ರಘುನಾಥ, ಸತೀಶ್ ನಾಯ್ಕ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಚುನಾವಣಾ ಪ್ರಕ್ರಿಯೆಯನ್ನು ರಿರ್ಟನಿಂಗ್ ಅಧಿಕಾರಿ ಪ್ರತಿಮಾ ಬಿ.ಎ ನಡೆಸಿಕೊಟ್ಟರು.