25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ನಲ್ಲಿ ಅಮಿತ್ ಶಾ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಕಣಿಯೂರು ಬ್ಲಾಕ್ ಸಮಿತಿ ವತಿಯಿಂದ ಅಂಬೇಡ್ಕರ್ ಕುರಿತಾದ ಹೇಳಿಕೆ ಖಂಡಿಸಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಮಡಂತ್ಯಾರು ಜಂಕ್ಷನ್ ಬಳಿ ಡಿ.20 ರಂದು ಪ್ರತಿಭಟನೆ ನಡೆಯಿತು.

ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ನಾಯಕರಾದ ನವಾಝ್ ಕಟ್ಟೆ, ಅಮಿತ್ ಶಾ ಅವರಿಗೆ ಗೃಹ ಸಚಿವರಾಗುವ ಅರ್ಹತೆ ಇಲ್ಲ.‌ ಇಂತಹ ವ್ಯಕ್ತಿಗೆ ಗೃಹ ಸಚಿವ ಸ್ಥಾನದಂತಹ ಉನ್ನತ ಹುದ್ದೆ ನೀಡಲಾಗಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಇರುವ ಭಾವನೆ ಅಮಿತ್ ಶಾ ಮೂಲಕ ಹೊರಬಿದ್ದಿದೆ. ಅಮಿತ್ ಶಾ ಅವರನ್ನು ಗೃಹ ಸಚಿವ ಹುದ್ದೆ ಯಿಂದ ಕೆಳಗೆ ಇಳಿಸಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಣಿಯೂರು ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಬಂಗೇರಕಟ್ಟೆ, ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್, ಕ್ಷೇತ್ರ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಮುಖಂಡರಾದ ಹನೀಫ್ ಪುಂಜಾಲಕಟ್ಟೆ, ನಝೀರ್ ಬಜಾರು, ಹನೀಫ್ ಟಿ.ಎಸ್, ರೌಫ್ ಪುಂಜಾಲಕಟ್ಟೆ, ಅಶ್ರಫ್ ಬದ್ಯಾರು, ಬ್ಲಾಕ್ ಪದಾಧಿಕಾರಿಗಳು, ಬ್ರಾಂಚ್ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಜಾರಿಗೆ ಬೈಲು ಸಮೀಪ ಟ್ಯಾಂಕರ್, ಕಾರು ಡಿಕ್ಕಿ

Suddi Udaya

ಅಗತ್ಯ ಬಿದ್ದರೆ ಸಂತ್ರಸ್ಥರ ನೆರವಿಗೆ ವಯನಾಡ್ ಗೆ ತೆರಳಲು ಸಿದ್ಧರಿದ್ದೇವೆ : ಸಮಾಜ ಸೇವಕ ಡಾ. ರವಿ ಕಕ್ಕೆಪದವು

Suddi Udaya

ಗುಡ್ ಫ್ಯೂಚರ್ ಆಂ.ಮಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪುದುವೆಟ್ಟು: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ

Suddi Udaya

ರಾಜ್ಯಮಟ್ಟದ ಎಸ್ ಡಿ ಎಂ ಬಿ.ವೊಕ್ ಉತ್ಸವ : ವಾಣಿ ಪ. ಪೂ. ಕಾಲೇಜಿಗೆ ದ್ವಿತೀಯ ಸ್ಥಾನ

Suddi Udaya

ಉಜಿರೆ: ಎಸ್.ಡಿ.ಎಂ.ವಸತಿ ಪದವಿ ಪೂರ್ವ ಕಾಲೇಜು ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’

Suddi Udaya
error: Content is protected !!