25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ. 7 -12 : ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ಬಂದಾರು ಗ್ರಾಮದ ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಲ್ಲಿ ಜ. 7 ರಿಂದ 12 ರ ವರೆಗೆ ಶ್ರೀ ಸಿದ್ದಿವಿನಾಯಕ ದೇವರ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ ಹೇಳಿದರು.

ಅವರು ಡಿ. 23 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

13 ವರ್ಷಗಳ ಹಿಂದೆ ಮೊದಲ ಬ್ರಹ್ಮಕಲಶೋತ್ಸವ ನಡೆದಿದ್ದು ಈ ಬಾರಿ ದೇವಸ್ಥಾನದ ಸುತ್ತು ಪರದಿ, ಇಂಟರ್ ಲಾಕ್, ರೂ. 40 ಲಕ್ಷ ವೆಚ್ಚದ ಸಭಾ ಭವನ ಮೊದಲಾದ ಅಭಿವೃದ್ಧಿ ಕಾರ್ಯಗಳು ಆಗಿದೆ. ಬ್ರಹ್ಮ ಕಲಶೋತ್ಸವದ ಯಶಸ್ವಿಗೆ 23 ಉಪ ಸಮಿತಿ ರಚನೆ ಮಾಡಲಾಗಿದೆ. ಜ. 7ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಂಜೆ ಪೆರ್ಲ ಬೈಪಾಡಿ ದೇವಸ್ಥಾನದ ಪರಿಸರದವರಿಂದ ಹಸಿರುವಾಣಿ ಸಮರ್ಪಣೆ, ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ, ರಾತ್ರಿ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ. ಜ. 8 ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ಬಂದಾರು, ಮೊಗ್ರು, ಕಣಿಯೂರು ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಭಜನೆ, ಸಂಜೆ ಸ್ಥಳೀಯ ಬಜಿಲ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ, ರಾತ್ರಿ ಕಲ್ಲಡ್ಕ ವಿಠಲ ನಾಯಕ್ ಇವರಿಂದ ಗೀತಾ ಸಾಹಿತ್ಯ ಸಂಭ್ರಮ, ಡಿ. 9ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ಬಜಿಲ, ಅದೂರುಪೇರಲ್, ಕೊಯ್ಯರು, ಮಲೆಬೆಟ್ಟು, ಕಳಿಯ, ನ್ಯಾಯತರ್ಪು, ನಾಳ ಭಕ್ತರಿಂದ ಹಸಿರು ವಾಣಿ ಸಮರ್ಪಣೆ, ಭಜನೆ, ಸಂಜೆ ಪೆರ್ಲ ಬೈಪಾಡಿ ಸ. ಹಿ. ಪ್ರಾ. ಶಾಲಾ ಮಕ್ಕಳಿಂದ ಸಾಂಸ್ಕೃಕ ಕಾರ್ಯಕ್ರಮ, ರಾತ್ರಿ 7ರಿಂದ ಧಾರ್ಮಿಕ ಸಭೆ ನಂತರ ಮಂಜೇಶ್ವರ ಐಸಿರಿ ಶಾರದಾ ಆರ್ಟ್ಸ್ ತಂಡದಿಂದ ನಾಟಕ. ಜ. 10 ಬೆಳಿಗ್ಗೆ ವೈದಿಕ ಕಾರ್ಯಕ್ರಮ ಉಜಿರೆ, ಬೆಳಾಲು, ಮಾಯ, ಕೊಲ್ಪಾಡಿ ಭಕ್ತರಿಂದ ಹಸಿರುವಾಣಿ ಸಮರ್ಪಣೆ, ಭಜನೆ, ಸಂಜೆ ಕುಂಟಾಲಪಲ್ಕೆ ಅಂಗನವಾಡಿ, ಹಿ. ಪ್ರಾ. ಶಾಲಾ ಮಕ್ಕಳಿಂದ ವೈವಿದ್ಯ ಕಾರ್ಯಕ್ರಮ, ರಾತ್ರಿ ವಿಧುಷಿ ಪ್ರತೀಕ್ಷಾ ಆಚಾರ್ಯ, ವಿಧುಷಿ ಅಮೃತ ಸಂದೀಪ್, ವಿಧುಷಿ ಪೂಜಾ ಹಾಗೂ ಶಿಷ್ಯರಿಂದ ಭರತ ನಾಟ್ಯ, ನಂತರ ಜ್ಞಾನ ಗುರುರಾಜ್ ಇವರಿಂದ ಭಕ್ತಿ ಗಾಯನ, ಪೆರ್ಲ ಬೈಪಾಡಿ ಸರಕಾರಿ ಪ್ರೌಢ ಶಾಲಾ ಪಟ್ಲ ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷ ಶ್ರೀ ರಾಮಾಶ್ವಮೇಧ. ಜ.11ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ ಭಜನೆ, ಮದ್ಯಾಹ್ನ ಕರ್ನಾಟಕ ಗಮಕ ಕಲಾ ಪರಿಷತ್ ಬೆಳ್ತಂಗಡಿ ಇವರಿಂದ ಗಮಕ ವೈಭವ, ಸಂಜೆ ಪೆರ್ಲ ಬೈಪಾಡಿ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ, ರಾತ್ರಿ 7 ರಿಂದ ಸಭಾ ಕಾರ್ಯಕ್ರಮ, ಬಳಿಕ ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ವಾಣಿ ಕಲಾ ವೈಭವ ಜ. 12 ರಂದು ಬೆಳಿಗ್ಗೆ 108 ತೆಂಗಿನ ಕಾಯಿ ಗಣಹೋಮ, ಪ್ರತಿಷ್ಠೆ, ಶ್ರೀ ಸಿದ್ದಿವಿನಾಯಕ ದೇವರ ಪುನ‌ರ್ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಸಂಜೆ ನೃತ್ಯ ಭಜನೆ, ರಾತ್ರಿ ಸಭಾ ಕಾರ್ಯಕ್ರಮ, ರಂಗ ಪೂಜೆ ನಂತರ ಹಿರಿಯಡ್ಕ ಮೇಳದವರಿಂದ ಯಕ್ಷಗಾನ ಸಮುದ್ರ ಮಥನ ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಬಿ. ಬಾಲಕೃಷ್ಣ ಪೂಜಾರಿ ಬಜೆಗುತ್ತು, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಕಾರ್ಯದರ್ಶಿ ಸತೀಶ್ ಗೌಡ, ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು ಉಪಸ್ಥಿತರಿದ್ದರು.

Related posts

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

Suddi Udaya

ವೈಬ್ರೆಂಟ್ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿರವರಿಗೆ ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

Suddi Udaya

ನವೀಕೃತಗೊಂಡ ಉಜಿರೆ ಹಳೇಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸ್ತಾಂತರ

Suddi Udaya

ಕಕ್ಕಿಂಜೆಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮತಯಾಚನೆ

Suddi Udaya

ಗುರುವಾಯನಕೆರೆಯಲ್ಲಿ “ಆರ್ವಿಕ್” ಜ್ಯುವೆಲ್ಲರ್ಸ್ & ವರ್ಕ್ಸ್ ಶುಭಾರಂಭ

Suddi Udaya

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಭೇಟಿ

Suddi Udaya
error: Content is protected !!