20.1 C
ಪುತ್ತೂರು, ಬೆಳ್ತಂಗಡಿ
December 25, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರ ವಿರೂಪಗೊಳಿಸಿ ಧಮ೯ದ ಗೌರವಕ್ಕೆ ಧಕ್ಕೆ ಆರೋಪ : ನಾರಾವಿಯ ಶ್ರೀಮತಿ ವಿಜಯ ರವರ ಮೇಲೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ನಾರಾವಿ : ನಾರಾವಿಯ ಶ್ರೀಮತಿ ವಿಜಯ ಎಂಬುವರು ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ತನ್ನ ಫೇಸ್‌ ಬುಕ್‌ ಖಾತೆ ಹಾಗೂ ವಾಟ್ಸಪ್ ಮೂಲಕ ಫೋಟೋವನ್ನು ಹರಿ ಬಿಟ್ಟಿದ್ದು ಜೈನ ಧರ್ಮಕ್ಕೆ ದಕ್ಕೆಯನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ.24 ರಂದು ಪ್ರಕರಣ ದಾಖಲಾಗಿದೆ.

ಕಲ್ಮಂಜ ನಿವಾಸಿ ಪಣಿರಾಜ್ ಎಂಬುವರ ದೂರಿನಂತೆ ಡಿ.20 ರಂದು ನಾರಾವಿ ಗ್ರಾಮದ ವಿಜಯ ನಾರಾವಿ ಎಂಬುವರು ಜೈನ ಧರ್ಮಿಯರ ಆರಾದ್ಯ ದೇವರಾದ ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರಕ್ಕೆ ಮನುಷ್ಯನ ಮುಖವನ್ನು ಸೇರಿಸಿ ಚಡ್ಡಿ ಹಾಕಿ ತನ್ನ ಫೇಸ್‌ ಬುಕ್‌ ಖಾತೆ ಹಾಗೂ ವಾಟ್ಸಫ್‌ ಮೂಲಕ ಫೋಟೋವನ್ನು ಹರಿ ಬಿಟ್ಟಿರುತ್ತಾರೆ.ಇವರು ಹಲವಾರು ಬಾರಿ ಇದೇ ರೀತಿ ಜೈನ ಧರ್ಮ ಹಾಗೂ ಜೈನ ಧರ್ಮಿಯಯರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಗೂ ಪೋಸ್ಟ್ ಗಳನ್ನು ಹಾಕಿ ಅಹಿಂಸಾ ಪ್ರಿಯರಾದ ಜೈನ ಧರ್ಮಿಯರ ಮನಸ್ಸಿಗೆ ಘಾಸಿ ಉಂಟು ಮಾಡಿರುತ್ತಾರೆ, ಇದರಿಂದ ಜೈನ ಧರ್ಮಿಯರ ಮನಸ್ಸಿಗೆ ನೋವು ಉಂಟಾಗಿರುವುದು ಮಾತ್ರವಲ್ಲ, ಸನಾತನ ವಿಶ್ವ ಧರ್ಮವಾದ ಜೈನ ಧರ್ಮದ ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರೆಖ್ಯ: ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಸಿಡಿಲ ಆಘಾತಕ್ಕೆ ದನ ಹಾಗು ನಾಯಿ ಸಾವು

Suddi Udaya

ಗುರುವಾಯನಕೆರೆ: 7 ಮಂದಿ ಸಾಧಕರಿಗೆ ‘ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ’ ಪ್ರದಾನ

Suddi Udaya

ತೆಂಕಕಾರಂದೂರು : ಜನಾರ್ದನ ಆಚಾರ್ಯ ರವರ ಮನೆಯ ಹಿಂಬದಿ ಗುಡ್ಡ ಕುಸಿತ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ವಸಂತ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಸಂಜೀವ ಪೂಜಾರಿ ನಾಲ್ಕೂರು ನಿಧನ

Suddi Udaya

ಎ.19-28: ಕಾಜೂರ್ ಮಖಾಂ ಉರೂಸ್: ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ರಿಂದ ಪೋಸ್ಟರ್ ಬಿಡುಗಡೆ

Suddi Udaya
error: Content is protected !!