21.9 C
ಪುತ್ತೂರು, ಬೆಳ್ತಂಗಡಿ
December 27, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪದ್ಮುಂಜ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪದ್ಮುಂಜ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ರಕ್ಷಿತ್ ಪಿ. ಪಣೆಕ್ಕರ, ನಾರಾಯಣ ಗೌಡ, ಉದಯ ಭಟ್.ಕೆ, ಡೀಕಯ್ಯ ಗೌಡ, ರುಕ್ಮಯ್ಯ ಗೌಡ ಯಾನೆ ಪ್ರಭಾಕರ, ಪ್ರಸಾದ್.ಎ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ಉದಯ ಬಿ.ಕೆ, ಹಿಂದುಳಿದ ಬಿ ಕ್ಷೇತ್ರ ದಿಂದ ಅಶೋಕ.ಪಿ, ಮಹಿಳಾ ಕ್ಷೇತ್ರದಿಂದ ಶೀಲಾವತಿ, ಶಾರದಾ ಆರ್. ರೈ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಚಂದನ್ ಕುಮಾರ್.ಎ ಪರಿಶಿಷ್ಟ ಪಂಗಡದಿಂದ ದಿನೇಶ್ ನಾಯ್ಕ ಇವರುಗಳು ಬಿ.ವಿ. ಪ್ರತಿಮಾ ರಿಟನಿಂಗ್ ಅಧಿಕಾರಿಯವರಿಗೆ ಡಿ.೨೫ ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ, ಕಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಯತೀಶ್ ಶೆಟ್ಟಿ ಪಣೆಕ್ಕರ, ಕಣಿಯೂರು ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ, ಬಂದಾರು ಶಕ್ತಿ ಕೇಂದ್ರ ಪ್ರಮುಖ್ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮೊಗ್ರು ಶಕ್ತಿ ಕೇಂದ್ರ ಪ್ರಮುಖರಾದ ಗಂಗಾಧರ್ ಪೂಜಾರಿ ಹಾಗೂ ಜಿಲ್ಲೆ, ಮಂಡಲ, ಮಹಾಶಕ್ತಿ ಕೇಂದ್ರ, ಬಂದಾರು, ಮೊಗ್ರು, ಕಣಿಯೂರು ಬೂತ್ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿನಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ: ನವನೀತ್ ಕೊಯ್ಯೂರು ಅವರ ತಂಡ ದ್ವಿತೀಯ ಸ್ಥಾನ

Suddi Udaya

ಅತ್ತಾಜೆ ಮುಹಿಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ಬಕ್ರೀದ್ ವಿಶೇಷ ಪ್ರಾರ್ಥನೆ

Suddi Udaya

ಡಿ.27: ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯ : ಆಡಳಿತಾಧಿಕಾರಿ ನೇಮಕ ಸಾಧ್ಯತೆ

Suddi Udaya

ಬೆಳ್ತಂಗಡಿ: ಅಕ್ರಮ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳು ಪೊಲೀಸ್ ವಶ

Suddi Udaya
error: Content is protected !!