ಉಜಿರೆ: ರತ್ನಮಾನಸ ವಸತಿ ನಿಲಯದಲ್ಲಿ ಡಿ.25ರಂದು ಕ್ರಿಸ್ಮಸ್ ಕಾರ್ಯಕ್ರಮವನ್ನು ಆಚರಿಸಲಾಯಿತು.
ರತ್ನಮಾನಸ ವಸತಿ ನಿಲಯದ ಹಿರಿಯ ವಿದ್ಯಾರ್ಥಿ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕಗಳು, ವಚನಗಳು, ಹಾಡುಗಳನ್ನು ತಿಳಿಸಿಕೊಟ್ಟರು ಹಾಗೆಯೇ ಅವರು ಬಾಲ್ಯದಲ್ಲಿ ರತ್ನಮಾನಸ ವಸತಿ ನಿಲಯದಲ್ಲಿ ಕಳೆದ ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳುವುದರೊಂದಿಗೆ ತನ್ನ ಜೀವನ ರೂಪಿಸಿಕೊಳ್ಳಲು ಯಾವ ರೀತಿ ಪ್ರಯೋಜನಕಾರಿಯಾಗಿದೆ ಎನ್ನುವುದರೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಮಾತನಾಡಿ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಯಾವ ರೀತಿ ಪೂರ್ವ ಸಿದ್ದತೆಯೊಂದಿಗೆ ಜೀವನ ಮತ್ತು ಪರೀಕ್ಷೆ ಯಲ್ಲಿ ಯಾವ ರೀತಿ ಸಿದ್ದಾರಾಗಿರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ರತ್ನಮಾನಸ ವಸತಿ ನಿಲಯದ ಪಾಲಕ ಯತೀಶ್ ಕೆ ಬಳಂಜರವರು ವಹಿಸಿ ವಿದ್ಯಾರ್ಥಿಗಳಿಗೆ ಡಾ ಜೋಸೆಫ್ ಎನ್.ಎಂ. ರವರ ಪರಿಚಯವನ್ನು ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ರತ್ನಮಾನಸದ ಸಿಬ್ಬಂದಿಗಳಾದ ಉದಯರಾಜ್, ದೀಪಕ್ ಕೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿಲಯದಲ್ಲಿ ಕ್ರಿಸ್ಮಸ್ ಕೆಕ್‌ನ್ನು ಹಂಚುವುದರೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆರಿಸಲಾಯಿತು ಹಾಗೂ ಡಾ. ಜೋಸೆಫ್ ಎನ್.ಎಂ. ರವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ವಿನಾಯಕ ಪ್ರಾರ್ಥಿಸಿದರು. ಗಣ್ಯರ ಪರಿಚಯವನ್ನು ವಿದ್ಯಾರ್ಥಿಯಾದ ಸಮ್ಯಕ್ ಮಾಡಿದರು. ಪ್ರೀತಮ್ ಸಿ.ಜೆ. ಸ್ವಾಗತಿಸಿದರು ಅಪ್ಪು ವಂದಿಸಿದರು. ನಿಶೀತ್ ಕಾರ್ಯಕ್ರಮ ನಿರೂಪಿಸಿದರು.