April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಾಧಕರು

ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೆಯ ಪ್ರಶಸ್ತಿ” ಪ್ರದಾನ

ಉಜಿರೆ: ಪುತ್ತೂರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಡಿ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ನಟರಾಜ ವೇದಿಕೆಯಲ್ಲಿ ಜರುಗಿದ “ಶ್ರೀ ಆಂಜನೇಯ-56″ರ ಸಮಾರಂಭದಲ್ಲಿ ಯಕ್ಷಗಾನ ಸಂಘಟಕ, ಅಪೂರ್ವ ಧ್ವನಿಸುರುಳಿಗಳ ನಿರ್ಮಾಪಕ, ಅನನ್ಯ ತಾಳಮದ್ದಲೆಗಳ ರೂವಾರಿ, ನಿವೃತ್ತ ಜಮಾ ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳ ಅವರಿಗೆ “ಶ್ರೀ ಯಕ್ಷಾಂಜನೇಯ ಪ್ರಶಸ್ತಿ” ಹಾಗೂ ಖ್ಯಾತ ಯಕ್ಷಗಾನ ಭಾಗವತೆ ಭವ್ಯಶ್ರೀ ಕುಲಕುಂದ ಅವರಿಗೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ “ಮಹಿಳಾ ವಿಂಶತಿ ಗೌರವ” ನೀಡಿ ಅಭಿನಂದಿಸಲಾಯಿತು.

ಸ್ವರ್ಣೋದ್ಯಮಿ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೇ.ಮೂ. ಹರಿನಾರಾಯಣದಾಸ ಅಸ್ರಣ್ಣ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿರಿಯ ಅರ್ಥಧಾರಿ ಪ್ರಭಾಕರ ಜೋಶಿ, ವಿನಯ ಕುಮಾರ್, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಆನಂದ ಸವಣೂರು, ಕೋಶಾಧಿಕಾರಿ ದುಗ್ಗಪ್ಪ ಎನ್ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಭುಜಬಲಿ ಧರ್ಮಸ್ಥಳ ಅವರನ್ನು ಅಭಿನಂದಿಸಿದರು.

Related posts

ಕೊಕ್ಕಡ ಜೇಸಿಐ ಕಪಿಲಾ ಘಟಕಕ್ಕೆ ವಲಯಾಧ್ಯಕ್ಷರ ಭೇಟಿ, ಘಟಕ ವೆಬ್ ಸೈಟ್ ಲೋಕಾರ್ಪಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya

ಚಾರ್ಮಾಡಿ ನಿವಾಸಿ ಸತ್ಯನಾರಾಯಣ ನಾಯಕ್ ನಿಧನ

Suddi Udaya

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya

ಮಾಲಾಡಿ: ವಿದ್ಯುತ್ ಶಾರ್ಟ್ ನಿಂದ ಮನೆಯಲ್ಲಿ ಬೆಂಕಿ: ಸೋತ್ತುಗಳು ಬೆಂಕಿಗಾಹುತಿ

Suddi Udaya
error: Content is protected !!