ಅರಸಿನಮಕ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯೆ ರೇವತಿ ಯವರ ವಾತ್ಸಲ್ಯ ಮನೆ ನಿರ್ಮಾಣದ ಕೆಲಸವನ್ನು ಅಡಿಗಲ್ಲು ಹಾಕುವ ಮೂಲಕ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ಧರ್ಮರಾಜ ಅಡ್ಕಾಡಿ, ಸತೀಶ್ ಶೆಟ್ಟಿ, ಮಂಜುಳಾ ಕಾರಂತ್, ಊರಿನ ಹಿರಿಯರಾದ ಪದ್ಮಯ್ಯ ಗೌಡ, ತಾಲೂಕು ಯೋಜನಾಧಿಕಾರಿಗಳಾದ ಸುರೇಂದ್ರ , ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಮಧುರಾ ,ಮೇಲ್ವಿಚಾರಕರಾದ ಶಶಿಕಲಾ ರವರು ಸೇವಾಪ್ರತಿನಿಧಿ ಯಮುನಾ ಮತ್ತು ರೂಪ ರವರು ವಿಪತ್ತು ತಂಡದ ಘಟಕ ಪ್ರತಿನಿಧಿ ಆನಂದ ದನಿಲ, ಸದಸ್ಯರಾದ ಸುರೇಶ್ ಶಿಬಾಜೆ , ಅವಿನಾಶ್ ಭಿಡೆ, ನವಜೀವನ ಸದಸ್ಯರಾದ ನಾರಾಯಣ ಉಪಸ್ಥಿತರಿದ್ದರು.