ಮಡಂತ್ಯಾರು: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ “ದೇವರ ಕಂಬಳ” ಎಂದೇ ಪ್ರಸಿದ್ದಿ ಪಡೆದ ತೇರಬಾಕಿಮಾರು ಗದ್ದೆಯಲ್ಲಿ 27 ನೇ ವರ್ಷದ ಶೇಷ-ನಾಗ ಜೋಡುಕರೆ ಕಂಬಳವು ಅನುವಂಶೀಯ ಆಡಳಿತ ಮೊಕ್ತೇಸರರಾದ ಡಾ. ಎಂ. ಹರ್ಷ ಸಂಪಿಗೆತ್ತಾಯ ಇವರ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಡಿ. 29 ರಂದು ನಡೆಯಲಿರುವುದು.
ಬೆಳಿಗ್ಗೆ ಕಂಬಳದ ಉದ್ಘಾಟನಾ ಸಮಾರಂಭವನ್ನು ಮಾಧವ ಜೋಗಿತ್ತಾಯ ಬಂಗಳಾಯಿ ಅವರು ಕಂಬಳ ಕೂಟ ಉದ್ಘಾಟಿಸುವರು. ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಕಿಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾವೀರ ಕಾಲೇಜು ಪ್ರಾಂಶುಪಾಲ ಡಾ| ರಾಧಾಕೃಷ್ಣ ಶೆಟ್ಟಿ, ಮಚ್ಚಿನ ಎಸ್ ಸಿಎಸ್‌ನ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ದುಗ್ಗಪ್ಪ ಗೌಡ ಪೊಸಂದೊಡಿ ಮಚ್ಚಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್, ಸದಾನಂದ ಪೂಜಾರಿ ಕುರುಡಂಗೆ, ದುಗ್ಗಪ್ಪ ಗೌಡ ಪೊಸಂದೊಡಿ, ಗ್ರಾಮ ಆಡಳಿತಾಧಿಕಾರಿ ಸತೀಶ್ ಪಿಂಟೋ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
8.30ರಿಂದ ನೇಗಿಲು ಕಿರಿಯ ಮತ್ತು ಹಿರಿಯ, 11ರಿಂದ ಹಗ್ಗ ಕಿರಿಯ ಮತ್ತು ಹಿರಿಯ ಮತ್ತು ಅಪರಾಹ್ನ ಗಂಟೆ 2ರಿಂದ ಅಡ್ಡ ಹಲಗೆಯ ಸ್ಪರ್ಧೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ಶಾಸಕ ಹರೀಶ್ ಪೂಂಜ ವಹಿಸಲಿದ್ದು, ಅನೇಕ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಮತ್ತು ಬಹುಮಾನ ವಿತರಣೆ ನಡೆಯಲಿದೆ.
ತೀರ್ಪುಗಾರರಾಗಿ ಸಂಜೀವ ಶೆಟ್ಟಿ ಮುಗೆರೋಡಿ, ಸಂಜಿತ್ ಶೆಟ್ಟಿ ಮುಗೇರೋಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ, ಅಜಿತ್ ಕುಮಾರ್ ಜೈನ್, ಈದು ಪಾಡ್ಯಾರು, ಸುಭಾಷ್ ಚಂದ್ರ, ಜನಾರ್ದನ ಕರ್ಪೆ, ಅವಿನಾಶ್ ಕುಲಾಲ್ ಮಣೂರು, ಸುದೇಶ್ ಕುಮಾರ್ ಆರಿಗ ದೇಣೂರು, ಮಿಥುನ್, ವಿಶ್ವರಾಜ್ ಬದ್ರೋಟ್ಟು, ದಾಮೋದರ ಆಚಾರ್ಯ ಮಡಕ್ಕಿಲ, ವಿಜಯ ಕುಮಾರ್ ಕಂಗಿತ್ತಿಲು, ಧರಣೇಂದ್ರ ಕುಮಾರ್ ಜೈನ್ ಮದ್ದಡ್ಡ, ಪ್ರಕಾಶ್ ಕರ್ಲ, ರಾಜೀವ ಶೆಟ್ಟಿ ಎತ್ತೂರು, ಸುಧಾಕರ ಶೆಟ್ಟಿ, ಮುಗೆರೋಡಿ, ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಸತೀಶ್ ಹೊಸ್ಟಾರ್, ಚೇತನ್ ಗೌಡ ಪಾಲಡ್ಕ ಅವರು ತೀರ್ಪುಗಾರರ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಬಹುಮಾನ: ನೇಗಿಲು ಹಿರಿಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ.15000 ಮತ್ತು ಶಾಶ್ವತ ಫಲಕ, ನೇಗಿಲು ಕಿರಿಯದಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ, ಹಗ್ಗ ಹಿರಿಯದಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ, ಹಗ್ಗ ಕಿರಿಯದಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ, ಅಡ್ಡ ಹಲಗೆಯಲ್ಲಿ ಪ್ರಥಮ ರೂ. 15000 ಮತ್ತು ಶಾಶ್ವತ ಫಲಕ ಹಾಗೂ ಕ್ರಮವಾಗಿ ದ್ವಿತೀಯ ಸ್ಥಾನ ಪಡೆದವರಿಗೆ ರೂ. 10000 ಮತ್ತು ಶಾಶ್ವತ ಫಲಕ ನೀಡಲಾಗುವುದು.