ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜು , ಗುರುವಾಯನಕೆರೆ ಇವರ ನೇತ್ರತ್ವದಲ್ಲಿ, ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಯೋಗದೊಂದಿಗೆ ಜ. 4 ರಂದು ನಡೆಯಲಿರುವ “ಬೆಳ್ತಂಗಡಿ ತಾಲೂಕು ಮಟ್ಟದ ಪುರುಷರ ಮತ್ತು ಆಹ್ವಾನಿತ ಮಹಿಳೆಯರ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ”ದ ಪೂರ್ವಭಾವಿ ಸಭೆಯು ಡಿ.28 ರಂದು ವಿದ್ವತ್ ಪಿಯು ಕಾಲೇಜು, ಗುರುವಾಯನಕೆರೆಯಲ್ಲಿ ನಡೆಯಿತು.
ಸಭೆಯಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಕಾರ್ಯದರ್ಶಿ ರಾಕೇಶ್ ಹೆಗ್ಡೆ ಬಳಂಜ, ನಿಕಟಪೂರ್ವ ಕಾರ್ಯದರ್ಶಿ ಗುರುಪ್ರಕಾಶ್ ಭಟ್, ಜೊತೆ ಕಾರ್ಯದರ್ಶಿ ಶಂಕರ್ ರಾವ್, ನಿಕಟ ಪೂರ್ವ ಜೊತೆ ಕಾರ್ಯದರ್ಶಿ, ಇಮ್ರಾನ್ ಬೆಳ್ತಂಗಡಿ ವಿದ್ವತ್ ಎಜುಕೇಶನ್ ಫೌಂಡೇಶನ್ ನ ಕೋಶಾಧಿಕಾರಿ ಕಾಶೀನಾಥ್. ಕೆ, ಹಾಗೂ ಕಾರ್ಯದರ್ಶಿ ಪ್ರಜ್ವಲ್ ರೈ ಇವರು ಉಪಸ್ಥಿತರಿದ್ದರು.
ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜ. 4 ರಂದು ರಾತ್ರಿ ಗಂಟೆ 7.30 ಕ್ಕೆ ಪ್ರಾರಂಭಗೊಳ್ಳಲಿದ್ದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಯಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.ಕ್ರೀಡಾಂಗಣದ ಉದ್ಘಾಟನೆಯನ್ನು ತಹಶೀಲ್ದಾರರು
ಪೃಥ್ವಿ ಸಾನಿಕಂ ನಡೆಸಲಿರುವರು ಎಂದು ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು ಇವರು ಪ್ರಕಟಣೆಯಲ್ಲಿ ತಿಳಿಸಿದರು.
ವಿದ್ವತ್ ಎಜುಕೇಶನ್ ಫೌಂಡೇಶನ್ ನ ಕೋಶಾಧಿಕಾರಿಯಾದ ಕಾಶೀನಾಥ್. ಕೆ ರವರು ಮಾತನಾಡಿ ತಾಲೂಕಿನ ಹಲವಾರು ಪ್ರತಿಷ್ಠಿತ ತಂಡಗಳು ಹಾಗೂ ಮಹಿಳೆಯರ ಆಹ್ವಾನಿತ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿ ಶಂಕರ್ ರಾವ್ ರವರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖ್ಯ ಅಥಿತಿಗಳ ಬಗ್ಗೆ ಮಾಹಿತಿ ನೀಡಿ, ವಂದಿಸಿದರು.