ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ 1008ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮವು ಡಿ.೨೯ರಂದು ನಡೆಯಿತು.

ಪರಮಪೂಜ್ಯ 108ಮುನಿಶ್ರೀ ಆದಿತ್ಯ ಸಾಗರ ಮಹಾರಾಜರು ಪಂಚಕಲ್ಯಾಣಗೊಂಡ 24 ತೀಥಂಕರರ ಜಿನ ಬಿಂಬಗಳನ್ನು ಶ್ರೀ ಕ್ಷೇತ್ರ ಚಂದ್ರಪುರಕ್ಕೆ ಆಶೀರ್ವಾದ ಮೂಲಕ ಪವನ್ ಪಂಡಿತ್ ಹಾಗೂ ಶ್ರೀವೀರ ಇಂದ್ರರವರ ಮೂಲಕ ಜಿನಬಿಂಬಗಳಿಗೆ ಜಲ, ಗಂಧ, ಸಿಯಾಳ ಹಾಲು ಮುಂತಾದ ದ್ರವ್ಯಗಳಿಂದ ಶ್ರಾವಕ ಶ್ರಾವಕಿಯರು ಅಭಿಷೇಕದೊಂದಿಗೆ ಅರಿಹಂತ ಇಂದ್ರರು 24 ಜಿನ ಬಿಂಬಗಳನ್ನು ಗಂಧಕುಟಿಯಲ್ಲಿ ಪ್ರತಿಷ್ಠಾಪಿಸಿದರು.

ಈ ಸಂದರ್ಭದಲ್ಲಿ ತ್ರಿಲೋಕ ಚಿಹ್ನೆಯ ನಾಮಫಲಕವನ್ನು ದಾನಿಗಳಾದ ಧರ್ಮಸ್ಥಳ ಕನ್ಯಾಡಿ ಆದೀಶ ಲಾಡ್ಜ್‌ನ ಮಾಲಕ ಪದ್ಮಪ್ರಸಾದ್ ಜೈನ್ ಇವರು ಅನಾವರಣಗೊಳಿಸಿದರು.

ಶ್ರಾವಕಿಯರಿಂದ ಭಜನೆ, ಗ್ರೀಷ್ಮ ಇಜಿಲಾಂಪಾಡಿ ಅವರಿಂದ ಜಿನಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಜಗದ್ಗುರು ಪರಮಪೂಜ್ಯ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ನೀಡಿದ ಇಂದ್ರಧ್ವಜವನ್ನು ಪ್ರತಿಷ್ಠಾಪಿಸಲಾಯಿತು.

ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಪಣಿರಾಜ್ ಜೈನ್ ಕೊಕ್ಕಡ ಇವರು ಮಾಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಿಜಯ ಕುಮಾರ್ ಜೈನ್, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪಿ.ಎನ್. ರವಿರಾಜ್ ಬಂಗ, ಜಿನರಾಜ ಪೂವಣಿ, ರಾಜೇಂದ್ರ ಜೈನ್, ಫಣಿರಾಜ್ ಜೈನ್, ಸಂತೋಷ್ ಕುಮಾರ್, ವೀರೇಂದ್ರ ಕುಮಾರ್, ಅಭಿನಂದನ್ ಜೈನ್, ಅತೀಶಯ್ ಜೈನ್, ಜಿನೇಂದ್ರ ಕುಮಾರ್, ಗುಣಪಾಲ ಬಂಗ ಹಾಗೂ ಬಾರಿ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.

ಪೂಜಾ ಕಾರ್ಯಕ್ರಮವನ್ನು ಪವನ್ ಪಂಡಿತ್, ವೀರಇಂದ್ರ ನೆರವೇರಿಸಿದರು. ಆಡಳಿತ ಮಂಡಳಿ ಸಂಚಾಲಕರಾದ ಡಾ. ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಿಂದ ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಉಪ್ಪಿನಂಗಡಿ ಭಾಗಗಳಿಂದ ಕಾಲೇಜು ಬಸ್ ಸೌಲಭ್ಯ

Suddi Udaya

ಲಾಯಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

 ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ನಕ್ಸಲ್ ರವೀಂದ್ರ ಶರಣಾಗತಿ

Suddi Udaya

ಮಡಂತ್ಯಾರು ಸಿಎ ಬ್ಯಾಂಕ್‌ ವತಿಯಿಂದ ಮಡಂತ್ಯಾರು ಗ್ರಾ.ಪಂ. ಹಾಗೂ ಮಾಲಾಡಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಅಭಿನಂದನಾ ಸಮಾರಂಭ

Suddi Udaya

ಬೆಳ್ತಂಗಡಿ: ಸವಿತಾ ಸಮಾಜದ ವತಿಯಿಂದ ಪೂವಪ್ಪ ಭಂಡಾರಿ ಹಾಗೂ ಮೋಹನ್ ಭಂಡಾರಿ ರವರಿಗೆ ಸನ್ಮಾನ

Suddi Udaya
error: Content is protected !!