ಸುಲ್ಕೇರಿ ಗ್ರಾಮದಲ್ಲಿರುವ ಭಗವಾನ್ ನೇಮಿನಾಥ ಸ್ವಾಮಿ ಬಸದಿ ಬಳಿ ನಿರ್ಮಿಸಲಾದ ನೂತನ ಶ್ರೀ ನೇಮಿನಾಥ ಸಭಾಭವನವನ್ನು 2025ರ ಜ.4ರಂದು ಶನಿವಾರ ಸಂಜೆ 4 ಗಂಟೆಗೆ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸುವರು.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾಕರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸುವರು.
ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಹರೀಶ್ ಕುಮಾರ್, ತುಮಕೂರಿನ ಉದ್ಯಮಿ ಜಿ. ಎಸ್. ರಾಜೇಂದ್ರ ಕುಮಾರ್ ಮತ್ತು ಅಳದಂಗಡಿ ಅರಮನೆ ಶಿವಪ್ರಸಾದ ಅಜಿಲರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಬಸದಿಯ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.