ಪೆರಾಡಿ: ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಸತೀಶ್ ಕೆ., ಪ್ರವೀಣ್ ಗಿಲ್ಬರ್ಟ್ ಪಿಂಟೋ, ಶ್ರೀಪತಿ ಉಪಾಧ್ಯಾಯ, ರಾಜೇಶ್ ಎನ್. ಶೆಟ್ಟಿ, ಅಕ್ಷಯ ಕುಮಾರ್, ಸುರೇಶ್ ಅಂಚನ್, ಪ.ಜಾತಿ ಕ್ಷೇತ್ರದಿಂದ ಕೃಷ್ಣಪ್ಪ, ಪ.ಪಂಗಡ ಕ್ಷೇತ್ರದಿಂದ ವಿಜಯ ನಾಯ್ಕ, ಹಿಂದುಳಿದ ಎ ಪ್ರವರ್ಗ ಕ್ಷೇತ್ರದಿಂದ ಹರಿಪ್ರಸಾದ್ ಎ., ಹಿಂದುಳಿದ ಬಿ ಪ್ರವರ್ಗ ಕೇತ್ರದಿಂದ ಎನ್. ಸೀತಾರಾಮ ರೈ, ಮಹಿಳಾ ಮೀಸಲು ಕ್ಷೇತ್ರದಿಂದ ದೇವಕಿ ಮತ್ತು ಸುಜಾತ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ನಡೆಸಿಕೊಟ್ಟರು.