ಬಳಂಜ: ಇಲ್ಲಿಯ ನಾಲ್ಕೂರು ರಾಜು ಪೂಜಾರಿ ಮತ್ತು ಡೀಕಮ್ಮ ದಂಪತಿ ಪುತ್ರ ಮನೋಹರ ಪೂಜಾರಿ ಇವರು ದೇಶ ಸೇವೆಯ ಇಚ್ಛಾಶಕ್ತಿಯಿಂದ ಪ್ರೇರಿತರಾಗಿ ಸೇನೆಗೆ ಆಯ್ಕೆಯಾಗಿದ್ದಾರೆ.
ಇವರು ಗಡಿಭದ್ರತಾ ಪಡೆಯ ಸೈನಿಕರಾಗಿ ನಿಯುಕ್ತಿಗೊಂಡಿದ್ದು, ಜ.೧೮ರಂದು ತರಬೇತಿ ಪಡೆಯಲು ಜಮ್ಮು ಕಾಶ್ಮೀರದ ಉಧಮ್ ಪುರಕ್ಕೆ ತೆರಳಲಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಳಂಜ ಶಾಲೆಯಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣವನ್ನು ಅಳದಂಗಡಿಯ ಜೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದಾರೆ.