37.9 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜ.5: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ಉಚಿತ ಬೃಹತ್ ವೈದ್ಯಕೀಯ ನೇತ್ರ ತಪಾಸಣಾ ಮತ್ತು ದಂತಾ ತಪಾಸಣೆ ಚಿಕಿತ್ಸಾ ಶಿಬಿರ

ಮಡಂತ್ಯಾರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಮಡಂತ್ಯಾರು ಶಾಖೆಯ 2ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಮಡವು, ಜೆಸಿಐ ಮಡಂತ್ಯಾರು, ಇವರ ಜಂಟಿ ಸಹಯೋಗದೊಂದಿಗೆ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಂಗಳೂರು ಇವರ ವೈದರ ತಂಡದೊಂದಿಗೆ ಉಚಿತ ಬೃಹತ್ ವೈದ್ಯಕೀಯ ನೇತ್ರ ತಪಾಸಣಾ ಮತ್ತು ದಂತಾ ತಪಾಸಣೆ ಚಿಕಿತ್ಸಾ ಶಿಬಿರ ವನ್ನು ಜ. 5 ರಂದು ಸಮಯ ಪೂವಾಹ್ನ 9.30ರಿಂದ ಅಪರಾಹ್ನ 12.30 ರವರೆಗೆ ಕಲಾ ಸಭಾಂಗಣ, ಶ್ರೀ ದುರ್ಗಾ ಕಾಂಪ್ಲೇಕ್ಸ್, ಮುಖ್ಯ ರಸ್ತೆ ಮಡಂತ್ಯಾರು ಇಲ್ಲಿ ಆಯೋಜಿಸಲಾಗಿದೆ.

ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ , ಮಧುಮೇಹ ತಪಾಸಣೆ , ಬಿ. ಪಿ ತಪಾಸಣೆ , ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಇ.ಸಿ.ಜಿ, ಕಿವಿ-ಮೂಗು,ಗಂಟಲು ತಪಾಸಣೆ, ಚರ್ಮರೋಗ ತಪಾಸಣೆ, ಬಾಯಿ ಮತ್ತು ಹಲ್ಲುಗಳ ಆರೋಗ್ಯ ತಪಾಸಣೆ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಹಲ್ಲುಗಳ ಶುಚಿ, ಇತರ ವೈದ್ಯಕೀಯ ಸೇವೆಗಳು ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡುವುದು.


ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Related posts

ಮಚ್ಚಿನ ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 2026 ರ ಕ್ಯಾಲೆಂಡರ್ ಬಿಡುಗಡೆ

Suddi Udaya

ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಮಾಜಿ ಶಾಸಕ ಕೆ ವಸಂತ ಬಂಗೇರ ರವರನ್ನು ಭೇಟಿ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್

Suddi Udaya

ನವೀಕೃತಗೊಂಡ ಉಜಿರೆ ಹಳೇಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸ್ತಾಂತರ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಪುದುವೆಟ್ಟು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಿಎಂ ಸಿದ್ದರಾಮಯ್ಯರವರಿಗೆ ಮನವಿ

Suddi Udaya
error: Content is protected !!