ಬೆಳ್ತಂಗಡಿ: ಮಂಗಳೂರಿನ ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ಮುಂಡೂರಿನ ಯುವಕ ಮೃತಪಟ್ಟ ಘಟನೆ ಡಿ.31ರಂದು ಸಂಜೆ ನಡೆದಿದೆ.
ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾರ್ (22ವ ) ಮೃತಪಟ್ಟ ವಿದ್ಯಾರ್ಥಿ.
ಪ್ರವೀತ್ ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನ ಕಲಾವಿದನಾಗಿದ್ದು ಹಲವು ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ವೇಷವನ್ನು ಮಾಡುತ್ತಿದ್ದರು. ಕಾಲೇಜು ಮುಗಿಸಿ ಮೇಳಕ್ಕೆ ಹೋಗುವ ಸಂದರ್ಭದಲ್ಲಿ ಅರ್ಕುಳ ಸಮೀಪ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು ಈ ವೇಳೆ ಐಸ್ ಕ್ರೀಮ್ ಸಾಗಿಸುತ್ತಿದ್ದ ವಾಹನ ಯುವಕನ ಮೇಲೆ ಹರಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.