September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

ಬಂದಾರು : ಕ್ರೀಡಾ ಸಾಧನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬಂದಾರು ಸರಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಶಾಲೆಯ ವಿವಿಧ ಅಗತ್ಯ ಕೆಲಸಗಳನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪೋಷಕರು,
ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಜೂ.26 ರಂದು ಶ್ರಮದಾನದ ಮೂಲಕ ನಡೆಸಿಕೊಟ್ಟರು.

ಶ್ರಮದಾನದಲ್ಲಿ ಶಾಲಾ ಆವರಣದ ಬೇಲಿ ದುರಸ್ತಿ, ಆಟದ ಮೈದಾನದ ಸುತ್ತಲಿನ ಚರಂಡಿ ನಿರ್ವಹಣೆ, ಶಾಲೆಯ ಅಡಿಕೆ ಗಿಡದ ತೋಟಕ್ಕೆ ಸೊಪ್ಪು ಹಾಕುವುದು ಮತ್ತಿತರ ಕೆಲಸಗಳನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಗೌಡ ಪೊಯ್ಯೋಲೆ ಅವರು ಮಾತನಾಡಿ ಎಲ್ಲಾ ಪೋಷಕರು ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಂಡು ಶ್ರಮದಾನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.
ಶ್ರಮದಾನದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮಂಜನಾಯ್ಕ ಸಿ. ಮತ್ತು ಶಿಕ್ಷಕ ವೃಂದ ಭಾಗಿಯಾದರು.

Related posts

ವೇಣೂರು ಪೊಲೀಸ್ ಠಾಣೆಯ ಎಎಸ್ಐ ಆಗಿ ಬೆನ್ನಿಚ್ಛನ್ ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ: ಕಂದಾಯ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಾಜಿದ್ ಪಾಷನನ್ನು ಹೊಳೆನರಸೀಪುರದಲ್ಲಿ ಬಂಧಿಸಿದ ಧಮ೯ಸ್ಥಳ ಪೊಲೀಸರು

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ವತಿಯಿಂದ ನಿವೃತ್ತ ಯೋಧ ಡಾ. ಗೋಪಾಲಕೃಷ್ಣ ಕಾಂಚೋಡುರಿಗೆ ಸನ್ಮಾನ

Suddi Udaya

ಚಾರ್ಮಾಡಿ: ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿ ವಿಠ್ಠಲ ಕುಲಾಲ್ ನಿಧನ

Suddi Udaya

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ನಿರೀಕ್ಷ ಎನ್. ಪೂಜಾರಿ ದ್ವಿತೀಯ

Suddi Udaya
error: Content is protected !!