26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಅಯ್ಯಪ್ಪ ಭಕ್ತರ ಮಹಾಸಂಗಮ ಸಮಾವೇಶದಲ್ಲಿ ಸಂಪತ್ ಬಿ. ಸುವರ್ಣ ರವರಿಂದ 7 ಹಕ್ಕೋತ್ತಾಯಗಳ ಮಂಡನೆ

ಅಯ್ಯಪ್ಪ ಭಕ್ತರ ಮಹಾಸಂಗಮ ಬೆಳ್ತಂಗಡಿ ತಾಲೂಕು ಸಮಾವೇಶದಲ್ಲಿ 7 ಹಕ್ಕೋತ್ತಾಯಗಳನ್ನು ಮಂಡಿಸಿ ಸರಕಾರಕ್ಕೆ ಸಲ್ಲಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಪತ್ ಬಿ. ಸುವರ್ಣ ಹಕ್ಕೋತ್ತಾಯ ಮಂಡಿಸಿದರು. 1. ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಹೆಚ್ಚುವರಿ ರೈಲಿನ ವ್ಯವಸ್ಥೆ ಮಾಡುವುದು ಮತ್ತು ಕೊಟ್ಟಾಯಂ ಮಾರ್ಗದಲ್ಲಿ ಸರಕಾರಿ ಬಸ್ಸಿನ ಹೆಚ್ಚುವರಿ ವ್ಯವಸ್ಥೆ ಮಾಡಬೇಕು. 2. ಕರ್ನಾಟಕದ ಬೇರೆ, ಬೇರೆ ಭಾಗಗಳಿಂದ ಪಾದಯಾತ್ರೆಯ ಮೂಲಕ ಬರುವ ಅಯ್ಯಪ್ಪ ವ್ರತಧಾರಿಗಳಿಗೆ ಆಹಾರ, ಕುಡಿಯುವ ನೀರು, ತಂಗುದಾಣ, ಆರೋಗ್ಯ ತಪಾಸಣೆ, ರಸ್ತೆ ದುರಸ್ತಿ, ಕನ್ನಡ ಮಾಹಿತಿ ಕೇಂದ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. 3. ಸನ್ನಿಧಾನದಲ್ಲಿರುವ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಕೇಂದ್ರದಲ್ಲಿ ಅನ್ನದಾನ ವ್ಯವಸ್ಥೆ ಪುನಃರಾಂಭಕ್ಕೆ ಅನುಮತಿ ನೀಡಬೇಕು. 4. ಕರ್ನಾಟಕದ ಲಕ್ಷಾಂತರ ಅಯ್ಯಪ್ಪ ಭಕ್ತರ ಸುಗಮ ಯಾತ್ರೆಗಾಗಿ ನಿಲುಕಲ್ಲಿನಲ್ಲಿ ಮಂಜೂರಾದ ಜಾಗದಲ್ಲಿ ಕರ್ನಾಟಕ ಭವನದ ಮೂಲಕ ವಸತಿಗೃಹ ನಿರ್ಮಾಣ ಮಾಡಬೇಕು.5. ಪ್ರತಿ ಊರಿನ ಅಯ್ಯಪ್ಪ ಶಿಬಿರಗಳಿಗೆ ಮತ್ತು ಅಯ್ಯಪ್ಪ ಮಂದಿರ ನಿರ್ಮಾಣಕ್ಕಾಗಿ ಸರಕಾರ ಕನಿಷ್ಠ ೨೦ ಸೆಂಟ್ಸ್ ಜಾಗವನ್ನು ಮಂಜೂರುಗೊಳಿಸಬೇಕು. 6. ಶಾಲಾ ಪಠ್ಯ ಪುಸ್ತಕಗಳಲ್ಲಿ ಶಬರಿಮಲೆ ಅಯ್ಯಪ್ಪ ಕ್ಷೇತ್ರದ ಬಗ್ಗೆ ಹಾಗೂ ಅಯ್ಯಪ್ಪ ವ್ರತಧಾರಿಗಳ ಆಚರಣೆ ಬಗ್ಗೆ ಸೇರ್ಪಡೆಗೊಳಿಸಬೇಕು. 7. ಶಬರಿಮಲೆಯಾತ್ರೆಯಲ್ಲಿ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸರಕಾರ ಧಾರ್ಮಿಕ ದತ್ತಿ ಇಲಾಖೆ ಮೂಲಕ ಮಾಸಶನ ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು.

Related posts

ಬಿ.ಸಿ ರೋಡ್ ಯುವತಿಯ ಹತ್ಯೆ ಪ್ರಕರಣ: ಆರೋಪಿಯ ಫೋಟೋ ತಿರುಚಿ ಬಜರಂಗದಳದ ವಿರುದ್ಧ ಅಪಪ್ರಚಾರ; ಪ್ರಕರಣ ದಾಖಲು

Suddi Udaya

ಉಜಿರೆಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪದವಿಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ

Suddi Udaya

ಅಕ್ರಮವಾಗಿ ಚಿಕ್ಕಮಗಳೂರಿನಿಂದ ಸಾಲೆತ್ತೂರಿಗೆ ಗೋವುಗಳ ಸಾಗಾಟ: ವಾಹನ ಹಾಗೂ ಚಾಲಕರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಮದ್ರಸ ಪಬ್ಲಿಕ್ ಪರೀಕ್ಷೆ: ಕುಂಟಿನಿ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸಕ್ಕೆ ಶೇ.100 ಫಲಿತಾಂಶ

Suddi Udaya

ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

Suddi Udaya
error: Content is protected !!