28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿಗಳಿಂದ ಅಂತರರಾಷ್ಟ್ರೀಯ ಸ್ಕಾರ್ಫ್ ದಿನಾಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಸ್ಕಾರ್ಫ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಸತತ ಮಳೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಣೆಯಾಗಿದ್ದರೂ, ವಿದ್ಯಾರ್ಥಿಗಳು ಆ ಸಮಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಸ್ಕಾರ್ಫ್ ಧರಿಸಿ ಅಂತರರಾಷ್ಟ್ರೀಯ ಸ್ಕಾರ್ಫ್ ದಿನವನ್ನು ಸಂಭ್ರಮದಿಂದ ಆಚರಿಸಿದರು. ಜೊತೆಗೆ, ತಮ್ಮ ಸುತ್ತಮುತ್ತಲಿನ ಹೊಸ ವ್ಯಕ್ತಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯನ್ನು ಪರಿಚಯಿಸಿ, ಅದರ ಉದ್ದೇಶ, ಮಹತ್ವ, ಆದರ್ಶಗಳು, ನಿಯಮಗಳು ಹಾಗೂ ಕರ್ತವ್ಯಗಳ ಕುರಿತು ಅರಿವು ಮೂಡಿಸಿದರು.

ಈ ಮೂಲಕ “ಯಾವುದೇ ಪರಿಸ್ಥಿತಿಯಲ್ಲಿಯೂ ಸೇವೆಗೆ ಸದಾ ಸಿದ್ಧ” ಎಂಬ ಸ್ಕೌಟ್–ಗೈಡ್ಸ್ ಧ್ಯೇಯವನ್ನು ವಿದ್ಯಾರ್ಥಿಗಳು ಕಾರ್ಯರೂಪದಲ್ಲಿ ಪ್ರದರ್ಶಿಸಿ ಮಾದರಿಯಾದರು.

ಕಾರ್ಯಕ್ರಮಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕ ಶಿಕ್ಷಕಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ ಪೂಜಾರಿ ಅವರು ಮಾರ್ಗದರ್ಶನ ನೀಡಿದರು. ಶಿಕ್ಷಕಿಯರಾದ ನೀತಾ ಕೆ ಎಸ್, ಜಯಲಕ್ಷ್ಮಿ, ಪ್ರಮೀಳಾ ಎನ್, ಜಯರಾಮ್, ಮಂಜುನಾಥ್, ಗೀತ ಪಿ, ರಮ್ಯಾ ಬಿ ಎಸ್, ಸೌಮ್ಯ ಪಿ, ಕಾರುಣ್ಯ, ಸಮತ, ಪುಷ್ಪಲತಾ, ಮೋಹಿನಿ, ಅಮಿತಾ ಸಹಕರಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ. ಆರ್. ಅವರು ವಿದ್ಯಾರ್ಥಿಗಳ ಈ ಸೇವಾ ಮನೋಭಾವವನ್ನು ಶ್ಲಾಘಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಇದೇ ಉತ್ಸಾಹವನ್ನು ಮುಂದುವರಿಸುವಂತೆ ಶುಭ ಹಾರೈಸಿದರು.

Related posts

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

Suddi Udaya

ರಾಷ್ಟ್ರೀಯ ಸಾಂಸ್ಕ ತಿಕ ಪ್ರತಿಭಾಶೋಧ ವಿದ್ಯಾರ್ಥಿ ವೇತನಕ್ಕೆ ಶಿರ್ಲಾಲುವಿನ ಸಾನ್ವಿ ಸಾಲಿಯಾನ್ ಆಯ್ಕೆ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

Suddi Udaya

ಚಂದ್ರಯಾನ 3 ರ ಯಶಸ್ಸು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ

Suddi Udaya

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ಧರ್ಮಸ್ಥಳ: ಕು. ಸೌಜನ್ಯ ಮನೆಗೆ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಭೇಟಿ

Suddi Udaya
error: Content is protected !!