ಅಳದಂಗಡಿ: ತುಳುನಾಡಿನಲ್ಲಿ ಬ್ರಹ್ಮಕಲಶೋತ್ಸವ, ನಾಗರಾಧನೆ,ಯಕ್ಷಗಾನ,ಕಂಬಳ,ಕೋಲ ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಯುತ್ತದೆ.ನಮ್ಮ ಸಂಸ್ಕೃತಿ ಆಚಾರ ವಿಚಾರ ವಿಶೇಷವಾದುದು.ಅಳದಂಗಡಿ ದೇವರ ಬ್ರಹ್ಮಕಲಶೋತ್ಸವವು ಎಲ್ಲರ ಸಹಕಾರ ಹಾಗೂ ಕೂಡುವಿಕೆಯಿಂದ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್ ಹೇಳಿದರು.
ಅವರು ಜ. 02 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸಕ್ಕೆ ಚಪ್ಪರ ಮುಹೂರ್ತದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು
ಅಳದಂಗಡಿ ಅರಸರ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಉಜಿರೆ ಉದ್ಯಮಿ,ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ನೋಹನ್ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಅಳದಂಗಡಿ ಅರಸರ ಹಾಗೂ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಸುಹೋಗವೆಂದು ನಂಬಿದ್ದೇನೆ. ಧಾರ್ಮಿಕ ಕಾರ್ಯಕ್ರಮಕ್ಕೆ ಚಪ್ಪರ ಮೂಹೂರ್ತ ವಿಶೇಷವಾದುದು.ಅಳದಂಗಡಿ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.ಒಗ್ಗಟ್ಟಿನಲ್ಲಿ ದೇವರ ಸೇವೆ ಮಾಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ವಹಿಸಿ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಎಲ್ಲರನ್ನು ಆಮಂತ್ರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ
ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು, ಪ್ರಧಾನ ಸಂಚಾಲಕ ಶಿವಪ್ರಸಾದ್ ಅಜಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಪ್ರ. ಕಾರ್ಯದರ್ಶಿ ಪಿ.ಹೆಚ್ ನಿತ್ಯಾನಂದ ಶೆಟ್ಟಿ ನಿರೂಪಿಸಿದರು. ಸಮಿತಿ ಪ್ರಮುಖರಾದ ಮೋಹನದಾಸ್ ವಂದಿಸಿದರು.
ದೇವಸ್ಥಾನದ ಪ್ರಧಾನ ಆರ್ಚಕ ಪ್ರಕಾಶ್ ಭಟ್ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು,ಮೊದಲ ಕಳಶ ಕೂಪನ್ ಖ್ಯಾತ ನಾಟಿ ವೈದ್ಯ ಬೇಬಿ ಪೂಜಾರಿ ಪುಣ್ಕೆತ್ಯಾರು ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗಂಗಾಧರ ಮಿತ್ತಮಾರ್,ಡಾ.ಎಮ್ ಎನ್ ತುಳಪುಳೆ,ಡಾ.ಶಶಿಧರ ಡೋಂಗ್ರೆ,ಸದಾನಂದ ಪೂಜಾರಿ ಉಂಗೀಲಬೈಲು,ಜಗನ್ನಾಥ್ ಶೆಟ್ಟಿ ಸುಪ್ರಭಾತ, ಜಗದೀಶ್ ಹೆಗ್ಡೆ ನಾವರ ಗುತ್ತು,ನಿರಂಜನ್ ಜೋಶಿ,ಪ್ರಶಾಂತ್ ದೇವಾಡಿಗ ನಡಾಯಿ,ಸುಭಾಶ್ಚಂದ್ರ ರೈ ಪಡ್ಯೋಡಿ,ಧರ್ಣಪ್ಪ ಪೂಜಾರಿ,ಪ್ರಶಾಂತ್ ಶೆಟ್ಟಿ,
ಕೃಷ್ಣಪ್ಪ ಬಿಕ್ಕಿರ,ಪ್ರಸನ್ನ ಹೆಗ್ಡೆ,ಸಂದೀಪ್ ನೀರಳ್ಕೆ,ಉಮೇಶ್ ಸುವರ್ಣ,ಗಣೇಶ್ ದೇವಾಡಿಗ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ ಶ್ರೀಮತಿ ಸುಮಂಗಳ, ಗಣೇಶ್ ದೇವಾಡಿಗ ಬ್ಯಾಂಡ್ ಮಾಸ್ಟರ್,ಮಂಜುನಾಥ ಆಚಾರ್ಯ,ಹರೀಶ್ ಸಾಲ್ಯಾನ್, ಶಾಂತಿರಾಜ್ ಗುಡಿಗಾರ್, ಶ್ರೀಮತಿ ಶುಭಲತಾ, ಶ್ರೀಮತಿ ಪೂರ್ಣಿಮಾ ಹರೀಶ್ ಆಚಾರ್ಯ ,ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು,ಊರವರು ಮೊದಲಾದವರು ಉಪಸ್ಥಿತರಿದ್ದರು