ಕುವೆಟ್ಟು: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ ಇವರ ಗ್ರಾಮ ಸಮಿತಿ ವತಿಯಿಂದ 170ನೇ ಗುರು ಪೂಜೆಯ ಪ್ರಯುಕ್ತ 12ನೇ ವರ್ಷದ ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ ಜ.೨೫ರಂದು ಕುವೆಟ್ಟು ಬಯಲು ಗದ್ದೆಯಲ್ಲಿ ಮುಂಡೂರು ಗೋಪಾಲಕೃಷ್ಣ ಭಟ್ ಮಾಲಾಡಿ ಇವರ ನೇತೃತ್ವದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಗ್ರಾಮ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಜ.1ರಂದು ಜರಗಿತು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು ಪ್ರಧಾನ ಕಾರ್ಯದರ್ಶಿ ಆನಂದ್ ಕೋಟ್ಯಾನ್ ರತ್ನಗಿರಿ ಪಣೆಜಾಲು. ಕೋಶಾಧಿಕಾರಿ ಗೋಪಿನಾಥ್ ದಾಸ್ ನ್ಯಾಯದಕಲ. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ. ಜಯಂತಿ ಜಾಲಿಯಡ್ಡ. ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನುಪ್ ಬಂಗೇರ. ಕೋಶಾಧಿಕಾರಿ ಹರೀಶ್ ಅನಿಲ. ಗ್ರಾಮ ಸಮಿತಿಯ ಮುಂದಿನ ಸಾಲಿನ ನಿಯೋಜಿತ ಅಧ್ಯಕ್ಷ ನಾಗೇಶ್ ಆದೇಲು. ಲಲಿತ ಕೇದಳಿಕೆ. ಸದಸ್ಯರಾದ ಉಮೇಶ್ ಮದ್ದಡ್ಕ. ಶೋಭ ವರಕಬೆ. ಪ್ರೇಮ ಎಂ ಬಂಗೇರ. ಕುಮಾರಿ ಮಾನ್ವಿ ಉಪಸ್ಥಿತರಿದ್ದರು