ಬೆಳ್ತಂಗಡಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಜಿರೋ ಟ್ರಾಫಿಕ್ ಮೂಲಕ ೬ ತಿಂಗಳ ಮಗು ವೃಂದಳನ್ನು ಕರೆದೊಯ್ಯಲಾಯಿತು. ಖ್ಯಾತ ಮುಳುಗು ತಜ್ಞ, ಸಾಮಾಜ ಸೇವಕ ಈಶ್ವರ್ ಮಲ್ಪೆ ಅವರ ಆಂಬುಲೆನ್ಸ್ ಮೂಲಕ ಮಗುವನ್ನು ಉಚಿತವಾಗಿ ಚಿಕಿತ್ಸೆಗೆ ಕರೆದೊಯ್ಯಲಾಯಿತು.
ಮಣಿಪಾಲದಿಂದ ಹಿರಿಯಡ್ಕ, ಕಾರ್ಕಳ, ಬಜಗೋಳಿ, ಗುರುವಾಯನಕೆರೆ,ಬೆಳ್ತಂಗಡಿ, ಉಜಿರೆ, ಚಾರ್ಮಾಡಿ,. ಮೂಡಿಗೆರೆ, ಬೆಲೂರು, ಹಾಸನ, ಚನ್ನರಾಯಪಟ್ಣ, ಬೆಳ್ಳೂರು ಕ್ರಾಸ್, ನೆಲಮಂಗಲ ಮೂಲಕ ಜಯದೇವ ಆಸ್ಪತ್ರೆಗೆ ಕರೆಯದೊಯ್ಯಲಾಗುತ್ತಿದೆ.
ಮಣಿಪಾಲದಿಂದ ಹೊರಟ ಅಂಬುಲೆನ್ಸ್‌ಗೆ ಬೆಂಗಳೂರು ಮುಟ್ಟುವವರೆಗೆ ಯಾವುದೆ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸಾರ್ವಜನಿಕರು, ವಾಹನ ಸಾವಾರರು ದಾರಿ ಮಾಡಿಕೊಟ್ಟರು, ಅಲ್ಲಲ್ಲಿ ಪೊಲೀಸರು ನಿಂತು ಜಿರೋ ಟ್ರಾಫಿಕ್‌ಗೆ ಸಹಕರಿಸಿದರು. ಅಂಬ್ಯುಲೆನ್ಸ್ ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಅಳದಂಗಡಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ,
ಸೋಮಂತಡ್ಕ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ ಮೂಲಕ ಮೂಡಿಗೆರೆಗೆ ತಲುಪುವರೆಗೆ ವಾಹನ ಸವರಾರು, ಸಾರ್ವಜನಿಕರು, ಪೊಲೀಸರು ಪೂರ್ಣ ಸಹಕಾರ ನೀಡಿದರು. ಮಣಿಪಾಲದಿಂದ ಬೆಂಗಳೂರಿಗೆ ಮಗುವಿನ ಚಿಕಿತ್ಸೆಗೆ ಕರೆದೊಯ್ಯುವ ಬಗ್ಗೆ ನಿನ್ನೆಯಿಂದಲೇ ವಾಟ್ಸಫ್‌ನಲ್ಲಿ ಮಾಹಿತಿ ಹಾಕಿ ಸಾರ್ವಜನಿಕರ ಹಾಗೂ ವಾಹನ ಚಾಲಕರ ಸಹಕಾರವನ್ನು ಕೋರಲಾಗಿತ್ತು.