ಹೊಸಂಗಡಿ ವಲಯದ ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ತಾಲೂಕು ಮಾಜಿ ಜನಜಾಗೃತಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಜನಜಾಗೃತಿ ಸದಸ್ಯ ಮೋಹನ್ ಅಂಡಿಂಜೆ ಮಾಹಿತಿ ಕಾರ್ಯಾಗಾರವನ್ನು ನೆರವೇರಿಸಿದರು. ವಲಯ ಜನಜಾಗೃತಿ ಅಧ್ಯಕ್ಷ ಸುಬ್ಬಣ್ಣ ಪೂಜಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವೃಂದ ಹಾಗೂ ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.