ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆ ಗಳ ಬಹುಮಾನ ವಿತರಣಾ ಕಾರ್ಯಕ್ರಮ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಗಿರಿಜಾ ಮತ್ತು ಶ್ರೀಮತಿ ಮನೋರಮಾ ಇವರು ಭಾಗವಹಿಸಿದ್ದರು.
ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀಮತಿ ಗಿರಿಜಾರವರು ಸ್ಪರ್ಧೆಗಳಲ್ಲಿ ಬಹುಮಾನ ಮುಖ್ಯವಲ್ಲ. ಪ್ರತಿಯೊಂದು ಸ್ಪರ್ಧೆಗಳಲ್ಲಿಯೂ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶ್ರೀಮತಿ ಮನೋರಮಾ ಮಾತನಾಡುತ್ತಾ ಪುಸ್ತಕಗಳು ಒಳ್ಳೆಯ ಮಿತ್ರರಿದ್ದಂತೆ. ಹೆಚ್ಚು ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನವನ್ನು ಗಳಿಸಿಕೊಳ್ಳಿ. ಎನ್ನುತ್ತಾ ಪುರಾಣ ಕಥೆಯಾದ ಏಕಲವ್ಯನ ಕಥೆಯನ್ನು ಮಕ್ಕಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಕಮಲ್ ತೇಜ್ ರಜಪೂತ್ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
ಬಹುಮಾನಗಳ ಪಟ್ಟಿಯನ್ನು ಶ್ರೀಮತಿ ಕಾವ್ಯ, ಶ್ರೀಮತಿ ಉಷಾ, ಶ್ರೀಮತಿ ಪೂರ್ಣಿಮಾ ಕೆ.ಎಂ, ಶ್ರೀಮತಿ ನಿಖಿಲ ಡಿ. ಶ್ರೀಮತಿ ರಾಜೇಶ್ವರಿ ಬಿ. ಪಿ ವಾಚಿಸಿದರು.
ವಿದ್ಯಾರ್ಥಿಗಳಿಂದ ಪ್ರಾರ್ಥಿಸಿ, ಶೇಖರ್ ಗೌಡ ಸ್ವಾಗತಿಸಿ, ಕಾರ್ಯಕ್ರಮವನ್ನು ಶ್ರೀಮತಿ ಶ್ರೀಜಾ ನಿರೂಪಿಸಿದರು. ಶ್ರೀಮತಿ ಕೇಶವತಿ ಧನ್ಯವಾದವಿತ್ತರು. ಎಲ್ಲಾ ಶಿಕ್ಷಕರು ಸಹಕರಿಸಿದರು.