29.9 C
ಪುತ್ತೂರು, ಬೆಳ್ತಂಗಡಿ
January 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

ನಿಡ್ಲೆ: ಬರೆಂಗಾಯ ದ.ಕ.ಜಿ.ಪ.ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮವು ಜ.4 ಮತ್ತು5 ರಂದು ನಡೆಯಲಿದೆ.

ಇಂದು(ಜ.4) ಬೆಳಿಗ್ಗೆ ಬರೆಂಗಾಯ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ, ಮಂಗಳೂರು ಉದ್ಯಮಿಗಳಾದ ರಮೇಶ್ ರಾವ್ ಕೊಡಂಗೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ದಿ| ಅನಂತ ಪದ್ಮನಾಭಯ್ಯ ಪಾಂಡೀಲು ಇವರ ಕುಟುಂಬಸ್ಥರು ನೀಡಿದ ನೂತನ ಕೊಠಡಿಯ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಈ ವೇಳೆ ಅಮೃತ ಮಹೋತ್ಸವ ಸಮಿತಿ ಹಾಗೂ ಶಾಲಾ ಸಮಿತಿಯ ವತಿಯಿಂದ ಶಾಸಕ ಹರೀಶ್ ಪೂಂಜರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ರಮೇಶ್ ರಾವ್ ಕೊಡಂಗೆ, ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ಪೊಂರ್ದಿಲ, ಮುಖ್ಯ ಶಿಕ್ಷಕರು ಹಾಗೂ ಪ್ರಧಾನ ಕಾರ್ಯದರ್ಶಿ ಗೋಪಾಲ್, ಕೋಶಾಧಿಕಾರಿ ಕೃಷ್ಣ ಕುಮಾರ್ ಕಾಟ್ಲ, ಎಸ್‌ಡಿಎಂಸಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೊರ್ಕಳ, ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಶಿವರಂಜನ್ ಹೆಬ್ಬಾರ್, ವಿದ್ಯಾರ್ಥಿ ನಾಯಕ ಕು. ಮಿಥುನ್ ಎ., ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ, ಉಪಾಧ್ಯಕ್ಷ ರುಕ್ಮಯ್ಯ ಹಾಗೂ ಅಮೃತ ಮಹೋತ್ಸವ ಸಮಿತಿ, ಎಸ್.ಡಿ.ಎಂ.ಸಿ. ಸಮಿತಿ, ಸಂಘ ಸಂಸ್ಥೆಗಳಾದ ನಿಸರ್ಗ ಯುವಜನೇತರ ಮಂಡಲ , ಪ್ರಗತಿ ಬಂಧು ಒಕ್ಕೂಟ ಬರೆಂಗಾಯ, ವನದುರ್ಗಾ ಕ್ರೀಡಾ ಸಂಘ ಬರೆಂಗಾಯ , ಹಾಲು ಉತ್ಪಾದಕರ ಸೇವಾ ಸಂಘ ಬರೆಂಗಾಯ, ಹಿರಿಯ ವಿದ್ಯಾರ್ಥಿ ಸಂಘ, ಪೋಷಕ ವೃಂದ, ಶಿಕ್ಷಕ ವೃಂದ, ಶಾಲಾ ವಿದ್ಯಾರ್ಥಿಗಳು, ರಮೇಶ್ ರಾವ್ ಕೊಡಂಗೆ ರವರ ಕುಟುಂಬಸ್ಥರು ಹಾಗೂ ಎಲ್ಲಾ ಸಮಿತಿಯ ಸರ್ವ ಸದಸ್ಯರು ಮತ್ತು ಊರ ಸಮಸ್ತ ವಿದ್ಯಾಭಿಮಾನಿಗಳು ಭಾಗವಹಿಸಿದರು.

ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರವದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರುಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಹಾಗೂ ಸುದರ್ಶನ ವಿಜಯ ಮತ್ತು ನರಕಾಸುರ ಮೋಕ್ಷ ಯಕ್ಷಗಾನ ಬಯಲಾಟ ನಡೆಯಲಿದೆ.

ಜ.5 ರಂದು ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಲಾ ಮಕ್ಕಳಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ನಂತರ ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ಛದ್ಮವೇಷ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಲೆಯಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಎಸ್‌ಡಿಎಂ ಅಧ್ಯಕ್ಷರುಗಳಿಗೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಿಗೆ, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸರಕಾರಿ ಸೇವೆ ಪಡೆದುಕೊಂಡ ಹಿರಿಯ ವಿದ್ಯಾರ್ಥಿಗಳಿಗೆ, ಕ್ರೀಡೆ ಮತ್ತು ಶೈಕ್ಷಣಿಕವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಅಂಗನವಾಡಿ ಪುಟಾಣಿಗಳು ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯಗಳು ಹಾಗೂ ಮಹಿಳಾ ಹಿರಿಯ ವಿದ್ಯಾರ್ಥಿಗಳಿಂದ “ಆರ್ ಬುಡಯೆರ್” ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಕಾರ್ಯಕ್ರಮದ ನೇರಪ್ರಸಾರವನ್ನು ಸುದ್ದಿ ಉದಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು.

Related posts

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಂಘ ಉಜಿರೆ ವತಿಯಿಂದ ಆಹಾರೋತ್ಸವ ಕಾರ್ಯಕ್ರಮ

Suddi Udaya

ಫೆ 27-ಮಾ 02: ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಕಾರ್ಯಕ್ರಮ

Suddi Udaya

ಎಸ್ಸೆಸ್ಸೆಲ್ಸಿ ಮರು ಮೌಲ್ಯ ಮಾಪನ : ಬೆಳ್ತಂಗಡಿ ಶ್ರೀ ಧ.ಮಂ.ಆಂ.ಮಾ. ಶಾಲಾ ವಿದ್ಯಾರ್ಥಿ ಪ್ರತೀಕ್ ವಿ. ಎಸ್. ರಾಜ್ಯಕ್ಕೆ 7ನೇ ರ್‍ಯಾಂಕ್

Suddi Udaya

ಮೊಗ್ರು : ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25ಗಂಟೆಗಳ ನಿರಂತರ ಯೋಗ ತರಬೇತಿಯಲ್ಲಿ ಮುಗೇರಡ್ಕ ವಿದ್ಯಾಭಿಮಾನಿಗಳು ಭಾಗಿ

Suddi Udaya

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

Suddi Udaya

ಗೇರುಕಟ್ಟೆ: ಮಾನವೀಯತೆ ಮೆರೆದ ಕಳಿಯ ಗ್ರಾ.ಪಂ.ಕಾರ್ಯದರ್ಶಿ ಕುಂಞ ಕೆ., ಕಳಿಯ ಸಿ.ಎಚ್.ಓ. ಮತ್ತು ಸಿಬ್ಬಂದಿ

Suddi Udaya
error: Content is protected !!