ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಇದರ 2025-2030 ರ ಸಾಲಿನ ನೂತನ ಅಧ್ಯಕ್ಷರಾಗಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಹಿರಿಯರಾದ ಪಿ.ಕೆ ರಾಜು ಪೂಜಾರಿಯವರು ಆಯ್ಕೆಯಾಗಿದ್ದಾರೆ.
ಡಿ.31 ರಂದು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕರು ಕಚೇರಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸಂಜೀವ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ಜಿಲ್ಲಾ ಪ್ರತಿನಿಧಿಯಾಗಿ ಮಹಾವೀರ ಜೈನ್ ನಾರಾವಿ, ತಾಲೂಕು ಸಮಿತಿ ಉಪಾಧ್ಯಕ್ಷರಾಗಿ ವಿನಯ ಕುಮಾರ್ ಹೆಗ್ಡೆ ನಾರಾವಿ, ಪ್ರಧಾನ ಕಾರ್ಯದರ್ಶಿಯಾಗಿ ನಡ ಗ್ರಾ.ಪಂ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ ಬೊಳಿಯಂಜಿ, ಕೋಶಾಧಿಕಾರಿಯಾಗಿ ದಿನೇಶ್ ಗೌಡ ಪೊಸಂದೋಡಿ ಆಯ್ಕೆಯಾಗಿದ್ದಾರೆ. ಪದನಿಮಿತ್ತ ಕಾರ್ಯದರ್ಶಿಯಾಗಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಕಾರ್ಯನಿರ್ವಹಿಸಲಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು, ಸದಾನಂದ ಪೂಜಾರಿ ಉಂಗಿಲಬೈಲು ಅಳದಂಗಡಿ, ಸಂಜೀವ ಶೆಟ್ಟಿ ಪೆರಾಡಿ, ಜಿನೇಂದ್ರ ಕುಮಾರ್ ನಾರಾವಿ, ಎಂ. ವಿಜಯ ಕುಮಾರ್ ಮರೋಡಿ, ನಿತ್ಯಾನಂದ ರೈ ಕಳೆಂಜ ಕಾಯರ್ತಡ್ಕ, ಜಗದೀಶ್ ಹೆಗ್ಡೆ ನಾರಾವಿ, ಸುರೇಖ ಭಂಡಾರಿ ನಾರಾವಿ, ನಿತ್ಯಾನಂದ ಪೂಜಾರಿ ಕುತ್ಲೂರು, ವಸಂತ ಕೋಟ್ಯಾನ್ ಕಾಶಿಪಟ್ಣ, ಸಂಜೀವ ಶೆಟ್ಟಿ ಉಜಿರೆ ಆಯ್ಕೆಯಾದರು.