37.5 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪೆರೋಡಿತ್ತಾಯಕಟ್ಟೆ ಸ.ಉ.ಪ್ರಾ. ಶಾಲೆಯಲ್ಲಿ ಮೆಟ್ರಿ ಕ್ ಮೇಳ

ತೆಂಕಕಾರಂದೂರು: ಸ.ಉ.ಪ್ರಾ. ಶಾಲೆ ಪೆರೋಡಿತ್ತಾಯಕಟ್ಟೆಯಲ್ಲಿ ಮೆಟ್ರಿ ಕ್ ಮೇಳವನ್ನು ಜ.4 ರಂದು ನಡೆಸಲಾಯಿತು.

ಕಾರ್ಯಕ್ರಮಕ್ಕೆ ಎಸ್. ಡಿ.ಎಂ.ಸಿ ಅಧ್ಯಕ್ಷ ಮುಸ್ತಾಫಾ ಚಾಲನೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳು ,ತಾವು ಮನೆಯಲ್ಲಿ ತಯಾರಿಸಿದ ಜ್ಯೂಸ್ ,ತಿಂಡಿ ತಿನಿಸುಗಳು, ತಂಪು ಪಾನೀಯ, ಪಾನಿಪುರಿ ಇತ್ಯಾದಿಗಳನ್ನು ಸುಮಾರು 15 ಪುಟ್ಟ ಅಂಗಡಿಗಳಲ್ಲಿ ಜೋಡಿಸಿ ಉತ್ಸಾಹದಿಂದ ಮಾರಾಟ ಮಾಡಿದರು.

ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಅಳತೆ ಹಾಗೂ ಅಂದಾಜುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಮೆಟ್ರಿಕ್ ಮೇಳದ ಯಶಸ್ವಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯ ಕಾರಣೀಭೂತರಾದರು. ನೈಜ ವಸ್ತು ಮತ್ತು ನೈಜ ಹಣಕಾಸಿನ ವ್ಯವಹಾರದಿಂದ ವಿದ್ಯಾರ್ಥಿಗಳೆಲ್ಲರೂ ಸಂತೋಷಗೊಂಡರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಬೆನೆಡಿಕ್ಟಾ ಪಾಯಸ್ ರವರು ನೆರೆದವರೆಲ್ಲರನ್ನು ಸ್ವಾಗತಿಸಿದರು .ಗಣಿತ ಶಿಕ್ಷಕಿ ಕುಮಾರಿ ದೇವಿಕಾರವರು ಪ್ರಾಯೋಗಿಕವಾಗಿ ವ್ಯವಹಾರದಲ್ಲಿ ಆಗುವ ಲಾಭ, ನಷ್ಟ ,ರಿಯಾಯಿತಿಗಳ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್.ಡಿ.ಎಮ್. ಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಜ್ಯೋತಿಯವರು ವಂದಿಸಿದರು.

Related posts

ಪಾಸ್ಕ ಕಾಲದ ನಲವತ್ತನೆ ಶುಭ ಶುಕ್ರವಾರದ ಶಿಲುಬೆಯ ಹಾದಿ ದೇವಗಿರಿಯಲ್ಲಿ ಸಂಪನ್ನ

Suddi Udaya

ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆ ಶಿಕ್ಷಕ ಶಶಿಧರ ಡಿ. ಆಯ್ಕೆ

Suddi Udaya

ನಂದಿಬೆಟ್ಟ ಬಳಿ ಬೈಕ್ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ: ಹುಟ್ಟುಹಬ್ಬದ ದಿನದಂದೆ ಓಡೀಲುವಿನ ಯುವಕ ದೀಕ್ಷಿತ್ ಬಲಿ

Suddi Udaya

ಶಿರ್ಲಾಲು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ನಡ: ಸಿಡಿಲು ಬಡಿದು 2 ವರ್ಷದ ಮಗು ಅಸ್ವಸ್ತ

Suddi Udaya

ಶಿಶಿಲ: ಕಾರೆಗುಡ್ಡೆ ದಿ. ಪ್ರವೀಣ್ ರವರ ಮನೆಯವರಿಗೆ ದೀಪಾವಳಿ ಪ್ರಯುಕ್ತ ಬಟ್ಟೆ ಹಾಗೂ ಧನ ಸಹಾಯ

Suddi Udaya
error: Content is protected !!