September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜ.15: ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಪ್ರಯುಕ್ತ ‘ಬೃಹತ್ ರಕ್ತದಾನ’ ಶಿಬಿರ

ಬೆಳ್ತಂಗಡಿ: ಸುಮಾರು 5 ದಶಕಗಳ ಕಾಲ ರಾಜಕೀಯ ರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಾಮಾಣಿಕ, ಭ್ರಷ್ಟಚಾರ ರಹಿತ ಸೇವೆ ಸಲ್ಲಿಸಿ, ಜನ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಜಾತ್ಯಾತೀತ ಮನೋಧರ್ಮದಿಂದ ನೇರ ನಡೆ ನುಡಿಯ ನಿಷ್ಟುರವಾದಿ ಮಾತೃ ಹೃದಯದ ವ್ಯಕ್ತಿತ್ವ ಹೊಂದಿ ಶುದ್ಧ ರಾಜಕಾರಣ ನಡೆಸಿ ಕಳೆದ ವರ್ಷ ಮೇ 08 ರಂದು ವಿಧಿವಶರಾದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ ಮಾಜಿ ಶಾಸಕರಾದ ಕೆ. ವಸಂತ ಬಂಗೇರರ 79 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವರ್ಷಂಪ್ರತಿ ಅವರ ಹುಟ್ಟುಹಬ್ಬದ ದಿನದಂದು ನಡೆಸಿಕೊಂಡು ಬರುತ್ತಿದ್ದ ‘ಬೃಹತ್ ರಕ್ತದಾನ’ ಶಿಬಿರವನ್ನು ಜ.15 ರಂದು ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಹೇಳಿದರು.

ಅವರು ಜ.6 ರಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಕ್ತದಾನಿಗಳು, ಬಂಗೇರರ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಪೂರ್ವಾಹ್ನ 9.30 ರಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಘಟಕಕ್ಕೆ ರಕ್ತದಾನಿಗಳಿಂದ ರಕ್ತದಾನ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.ಬೆಳಗ್ಗೆ 10.30 ರಿಂದ ಕೀರ್ತಿಶೇಷ ಕೆ. ವಸಂತ ಬಂಗೇರರ ಬಗ್ಗೆ ವಿಶೇಷ ಉಪನ್ಯಾಸ, ಉಪನ್ಯಾಸಕರು ಡಾ| ತುಕಾರಾಮ ಪೂಜಾರಿ ಮುಖ್ಯಸ್ಥರು ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠ, ಬಂಟ್ವಾಳ , ದಯಾ ವಿಶೇಷ ಶಾಲಾ ಮಕ್ಕಳಿಗೆ ಸಮಿತಿ ವತಿಯಿಂದ ಊಟದ ವ್ಯವಸ್ಥೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೀರ್ತಿಶೇಷ ಕೆ.ವಸಂತ ಬಂಗೇರ ಅಭಿಮಾನಿಗಳ ಸಮಿತಿ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಕೋಶಾಧಿಕಾರಿ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷ ಲೋಕೇಶ್ ಗೌಡ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಹುಟ್ಟುಹಬ್ಬ ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ದೇವಿ ಪ್ರಸಾದ್ ಬೆಳ್ತಂಗಡಿ, ಲಕ್ಷ್ಮಣ ಗೌಡ, ಅಶ್ರಫ್ ನೆರಿಯ, ಯಶೋಧರ ಚಾರ್ಮಾಡಿ ಉಪಸ್ಥಿತರಿದ್ದರು.

Related posts

ಮೂಡುಕೋಡಿ ಶ್ರೀ ಸತ್ಯ ಸಾರಮಾನಿ ದೈವಸ್ಥಾನದ ಆಡಳಿತ ಸಮಿತಿಯಿಂದ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಸಿಎ ಅಂತಿಮ ಪರೀಕ್ಷೆ ಫಲಿತಾಂಶ: ಮುದ್ದಾಡಿಯ ದೀಪಕ್ ಹೆಗ್ಡೆಗೆ 28ನೇ ರ್‍ಯಾಂಕ್

Suddi Udaya

ಗೇರುಕಟ್ಟೆ: ಮನ್ ಶರ್ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

Suddi Udaya

ಜ.2: ಉಜಿರೆ ಪೆರ್ಲ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಮತ್ತು ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : ರಾಜ್ಯ ಮಟ್ಟದ ಅಧ್ಯಾಪಕರ ತರಬೇತಿ ಕಾರ್ಯಕ್ರಮ

Suddi Udaya

ಮುಗೇರಡ್ಕ- ಪರಕ್ಕಜೆ ನಿವಾಸಿ ಡೀಕಯ್ಯ ಗೌಡ ನಿಧನ

Suddi Udaya
error: Content is protected !!