March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಾಣಿಲ ಮಾತೃಭೂಮಿ ಯುವ ವೇದಿಕೆ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ಜ.7 ರಂದು ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ ಸರಕಾರಿ ಪ್ರೌಢ ಶಾಲೆ ಮಾಣಿಲ ಇಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ Epiance Software Pvt Ltd. ಇದರ ಡೈರೆಕ್ಟರ್ ಸತೀಶ್ ನಾಯಕ್ ಅವರು ಮಾತನಾಡಿ ತಿಳುವಳಿಕೆ ಎಂಬುವುದು ಬೆಳಗುತ್ತಿರುವ ದೀಪದಂತೆ ಅದನ್ನು ನಾವು ಇನ್ನೊಬ್ಬರಿಗೆ ಹಂಚಿ ಕೊಳ್ಳುವುದರಿಂದ ಅದು ಎಲ್ಲೆಡೆಯೂ ಪಸರಿಸುತ್ತದೆ ಹಾಗೆಯೇ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಮತ್ತು ನಂತರ ಯಾವ ವಿಭಾಗವನ್ನು ಆಯ್ಕೆ ಮಾಡಬಹುದು ಹಾಗೂ ವಿದ್ಯಾರ್ಥಿಯು ಒಂದು ಮನೆಯ ಮಗುವಾಗಿ, ಶಾಲೆಯ ವಿದ್ಯಾರ್ಥಿಯಾಗಿ, ಊರಿನ ಪ್ರಜೆಯಾಗಿ ಮನೆಗೆ-ಶಾಲೆಗೆ-ಊರಿಗೆ ನಮ್ಮ ಕೊಡುಗೆ ಏನು ಎಂಬುವುದನ್ನು ಸವಿಸ್ತಾರವಾಗಿ ತಿಳಿಸಿ ಕೊಟ್ಟರು.
ಕಾರ್ಯಾಗಾರದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಮೇಡಂ ಮಾತನಾಡಿ ಮಾತೃಭೂಮಿ ಯುವ ವೇದಿಕೆ ಸಂಘದ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೀಯ ಪ್ರಶಂಸೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸೇನಾ ವಾಹನ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದು ಮೃತಪಟ್ಟ ಐವರು ಯೋಧರಾದ ಸುಬೇದಾರ್ ದಯಾನಂದ ತಿರಕಣ್ಣವರ್, ಲ್ಯಾನ್ಸ್ ಹವಾಲ್ದಾರ್ ಅನೂಪ್, ನಾಯಕ್ ಘಡ್ಗೆ ಶುಭ ಸಮಾಧಾನ್, ಸಿಪಾಯಿ ನಿಕುರೆ ದಿಗಂಬರ್ ಮತ್ತು ಸೆ.ಮಹೇಶ್ ಮರಿಗೊಂಡ್ ಇವರು ವೀರ ಮರಣವನ್ನು ಹೊಂದಿರುತ್ತಾರೆ. ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಈ ಯೋಧರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಹಾಗೆಯೇ ಕಳೆದ ಐದಾರು ತಿಂಗಳ ಅವಧಿಯಲ್ಲಿ ಹಿರಿಯರಾದ ದಿ| ಭುಜಂಗ ಆಚಾರ್ಯ, ದಿ| ನಾರಾಯಣ ಆಚಾರ್ಯ, ದಿ| ಅನಂತ ನಾಯಕ್, ದಿ| ಚಕ್ಕು ಮೇರಾ ಇವರನ್ನು ನಮ್ಮ ಗ್ರಾಮ ಕಳೆದು ಕೊಂಡಿದೆ. ಇವರಿಗೂ ಮತ್ತು ಯೋಧರ ಆತ್ಮಗಳಿಗೆ ಚಿರಶಾಂತಿಯನ್ನು ಕೋರುತ್ತಾ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಕುಮಾರ್ ಕಕ್ವೆ ವಹಿಸಿದರು, ಸದಸ್ಯರಾದ ಮಿಥುನ್ ಕುಮಾರ್ ಇವರು ಸ್ವಾಗತಿಸಿ, ಸದಸ್ಯರಾದ ಶ್ರೀಮತಿ ಮಂಜುಳಜ್ಯೋತಿ ವಂದಿಸಿದರು. ಕು|ಮನ್ವಿ, ಕು|ವರ್ಷಾ ಮತ್ತು ಕು| ಆಶಿಕಾ ಪ್ರಾರ್ಥಿಸಿ, ಸದಸ್ಯೆ ಕು| ದೀಕ್ಷಾ ಕಾಪಿಕಾಡ್ ಇವರು ಕಾರ್ಯಕ್ರಮ ನಿರೂಪಿಸಿದರು.

Related posts

ಸುದ್ದಿ ಉದಯ ಪತ್ರಿಕೆಯ ಫಲಶ್ರುತಿ; ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ಮನೆಯಲ್ಲಿಯೇ ಇದ್ದ ಬಾಲಕಿ ಮರಳಿ ಶಾಲೆಗೆ

Suddi Udaya

ಡಿ.17 : ರೆಖ್ಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೃಹತ್ ಪಾದಯಾತ್ರೆ

Suddi Udaya

ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಸಮಾರೋಪ

Suddi Udaya

ಫೇಸ್‌ಬುಕ್ ಜಾಲತಾಣದಲ್ಲಿ ಮಹಿಳೆಗೆ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಬರಹ ಬೆದರಿಕೆ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ನೂತನ ಸದಸ್ಯರಿಗೆ ಓರಿಯೆಂಟೇಶನ್ ಕಾರ್ಯಕ್ರಮ

Suddi Udaya
error: Content is protected !!