ಉಜಿರೆಯ ನಾಗರಾಜ ಕಾಂಪೌಂಡ್ ನ “ಶ್ರೀ ಮಾತಾ” ದಲ್ಲಿ ಜ.14ರಂದು ನಡೆಯುವ ಯಕ್ಷಭಾರತಿ ದಶಮಾನೋತ್ಸವ ಅಂಗವಾಗಿ ಶ್ರೀಮತಿ ಚೇತನಾ ಮತ್ತು ಗುರುಪ್ರಸಾದ್ ಅವರ ಪ್ರಾಯೋಜನೆಯಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮ ಮತ್ತು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಯವರ ನೇತೃತ್ವದ ಪಾವಂಜೆ ಮೇಳದವರಿಂದ ನಡೆಯುವ ಯಕ್ಷಗಾನ “ದೇವಿ ಮಹಾತ್ಮೆ”ಯ ಆಮಂತ್ರಣ ಪತ್ರಿಕೆಯನ್ನು ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ನಡೆದ ಯಕ್ಷಭಾರತಿ ಸಮಾಲೋಚನಾ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ, ಟ್ರಸ್ಟಿ ಹರೀಶ್ ರಾವ್, ಸುರೇಶ ಕುದ್ರಂತಾಯ, ಮುರಳೀಧರ ದಾಸ್ , ಕೌಶಿಕ್ ರಾವ್ , ಗುರುಪ್ರಸಾದ್ ಸಂಚಾಲಕ ಮಹೇಶ ಕನ್ಯಾಡಿ ಉಪಸ್ಥಿತರಿದ್ದರು.