19.3 C
ಪುತ್ತೂರು, ಬೆಳ್ತಂಗಡಿ
January 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಿಲಿಗೂಡು ಶಾಲಾ ವಾರ್ಷಿಕೋತ್ಸವ, ವಿವೇಕ ಕೊಠಡಿ ಮತ್ತು ರಂಗಮಂದಿರ ಉದ್ಘಾಟನೆ

ಕಣಿಯೂರು : ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಸಂಭ್ರಮ, ನೂತನ ಕಟ್ಟಡ ಮತ್ತು ರಂಗಮಂದಿರ ಉದ್ಘಾಟನೆಯು ಜ.5 ರಂದು ಜರುಗಿತು.
ಪಿಲಿಗೂಡು ಪದ್ಮನಾಭ ಶಿಲ್ಪಿ ಧ್ವಜಾರೋಹಣ ಮಾಡಿದರು. ಕಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ ನೂತನ ಕೊಠಡಿ ಮತ್ತು ರಂಗ ಮಂದಿರವನ್ನು ಉದ್ಘಾಟಿಸಿದರು.

ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಾಲೆಗೆ ಡೆಸ್ಕ್, ಬೆಂಚು ಕೊಡುಗೆ ನೀಡಲಾಯಿತು. ಹಳೆ ವಿದ್ಯಾರ್ಥಿ ನಿವೃತ್ತ ಅದಾಯ ತೆರಿಗೆ ಇಲಾಖೆ ಚಂದ್ರ ಕುಮಾರ್, ಜಯಸೇನ ಜಾಜಿ ಬೆಟ್ಟು, ತಿಲಕ್ ನಾಯಕ್ ಕುಡುವಂತಿ, ಪದ್ಮನಾಭ ಶಿಲ್ಪಿ ಪಿಲಿಗೂಡು ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸೇಸಪ್ಪ ಮೂಲ್ಯ ,ಶ್ರೀಮತಿ ಪ್ರಿಯಾಂಕ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಧಿಕಾರಿ ತಾರಾಕೇಸರಿ, ಹಳೆ ವಿದ್ಯಾರ್ಥಿ ನಿವೃತ್ತ ಅದಾಯ ತೆರಿಗೆ ಇಲಾಖೆ ಚಂದ್ರ ಕುಮಾರ್, ಕಣಿಯೂರು ಗುತ್ತು ಸುದರ್ಶನ ಹೆಗ್ಡೆ, ಪದ್ಮುಂಜ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ನೂತನ ಹಾಲಿ ಸದಸ್ಯ ರಕ್ಷಿತ್ ಶೆಟ್ಟಿ. ಪಣಿಕ್ಕರ, ಪ್ರಪ್ಪುಲ್ಲಚಂದ್ರ ಮುಗೆರೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ತಾಲೂಕು ಯೋಜನಾಧಿಕಾರಿ ದಯಾನಂದ, ಎಸ್.ಡಿ.ಎಂ.ಸಿ.ಅಧ್ಯಕ್ಷ ಇಸ್ಮಾಯಿಲ್, ಮುಖ್ಯ ಶಿಕ್ಷಕಿ ಪ್ಲೇವಿಯ ಡಿ.ಸೋಜ, ವಾರ್ಷಿಕೋತ್ಸವ ಸಮಿತಿ ಉಪಾಧ್ಯಕ್ಷರಾದ ಭಾರತಿ ದಯಾನಂದ, ಯಾದವ, ಕಾರ್ಯದರ್ಶಿ ಜಾನಕಿ,ಸೌಮ್ಯ, ದೀಪ್ತಿ,ಕೋಶಾಧಿಕಾರಿ ಧನಂಜಯ ಬರಂಬು, ಸಂಚಾಲಕರಾದ ಚಂದ್ರಕ್ಕಿಕೆ.ಪಿ.,ಉಷಾ, ಭುವನೇಶ್ವರ, ಶಾಲಾ ವಿದ್ಯಾರ್ಥಿ ನಾಯಕ ಮಾ| ಕುಮಾರೇಶ ಸಿ, ಗೌರವ ಸಲಹೆಗಾರರಾಗಿ ಶಿವಶಂಕರ ನಾಯಕ್ ಮಾರುತಿಪುರ, ನಿವೃತ್ತ ಎಸ್‌.ಬಿ.ಐ.ಬ್ಯಾಂಕ್ ಸಿಬ್ಬಂದಿ ರಾಮಕೃಷ್ಣ ಪಿಂಡಿವನ, ವಿಠ್ಠಲ ಶೆಟ್ಟಿ ಕೊಲ್ಲೊಟ್ಟು, ಯಶೋಧರ ಶೆಟ್ಟಿ ಕಣಿಯೂರು, ಶಾಲಾ ಸಹ ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಧನಂಜಯ ಕುಮಾರ್ ಡಿ, ಸ್ವಾಗತಿಸಿದರು. ಮೊಗ್ರು ಶಾಲಾ ಮುಖ್ಯಶಿಕ್ಷಕ ಮಾಧವ ಗೌಡ ಬಿ.ನಿರೂಪಿಸಿದರು.


Related posts

ಅಕ್ಟೋಬರ್ 2ರಂದು ಬೆಳ್ತಂಗಡಿಯಲ್ಲಿ ತಾಲೂಕು ಮಟ್ಟದ ಗಾಂಧಿ ಜಯಂತಿ ಆಚರಣೆಗೆ ನಿರ್ಧಾರ: ತಾ. ಜನಜಾಗೃತಿ ವೇದಿಕೆ ಸಭೆ

Suddi Udaya

ದಿ| ವಸಂತ ಬಂಗೇರರ ಮನೆಗೆ ರಾಜ್ಯದ ಮಾಜಿ ಸಚಿವ ಪಿ.ಜಿ. ಆರ್ ಸಿಂಧ್ಯ ಭೇಟಿ

Suddi Udaya

ಬೈಕ್ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೆಳಾಲಿನ ಶೀನಪ್ಪ ಗೌಡ ನಿಧನ

Suddi Udaya

ಮಾಲಾಡಿ ಗ್ರಾ.ಪಂ. ಮತ್ತು ಗ್ರಾ.ಪಂ. ಗ್ರಂಥಾಲಯದ ಆಶ್ರಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಬೆಳಾಲು ಶ್ರೀಧ.ಮ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ: ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!