34.7 C
ಪುತ್ತೂರು, ಬೆಳ್ತಂಗಡಿ
January 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

ಉಜಿರೆ: ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಉಷಾಕಿರಣ್‌ ಕಾರಂತ್ ರವರ ಅಧ್ಯಕ್ಷತೆಯಲ್ಲಿ ಜ.9ರಂದು ಉಜಿರೆ ಶಾರದಾ ಮಂಟಪದಲ್ಲಿ ಜರಗಿತು.

ಮಾರ್ಗದರ್ಶನ ಅಧಿಕಾರಿಯಾಗಿ ನೆರಿಯ ಪಶು ವೈದ್ಯಾಧಿಕಾರಿ ಡಾ. ಯತೀಶ್ ಕುಮಾರ್ ಸಭೆಯನ್ನು ಮುನ್ನಡೆಸಿದರು.

ಮುಖ್ಯ ಮಂತ್ರಿ ಪದಕ ಪುರಸ್ಕೃತ ಉಪ ವಲಯ ಅರಣ್ಯಧಿಕಾರಿ ಕು. ಕಮಲಾ ರವರಿಗೆ ಸಭೆಯಲ್ಲಿ ಗೌರವಿಸಲಾಯಿತು. ಪ.ಜಾತಿ ಪ. ಪಂಗಡದ 580 ಕುಟುಂಬಗಲಿಗೆ ಕುರ್ಚಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್‌ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್‌ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಹೆಚ್. ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ರಮೇಶ್ ನಾಯ್ಕ ವಾರ್ಡ್‌ ಸಭೆಗಳಲ್ಲಿ ಬಂದ ಬೇಡಿಕೆಯನ್ನು ಓದಿದರು. ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ಕಾರ್ಯದರ್ಶಿ ಶ್ರವಣ್ ಕುಮಾರ್ ವಂದಿಸಿದರು.

Related posts

ಸೆ.11: ಬೆಳ್ತಂಗಡಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ರವರಿಗೆ ಭಾರತ ರತ್ನ ಗೌರವ

Suddi Udaya

ಮೇಲಂತಬೆಟ್ಟು ಗ್ರಾಮದ ನಾಗ ಬ್ರಹ್ಮ ಬದಿನಡೆ ಬಳಿಯ ಮನೆ ಹಾನಿ ಹಾಗೂ ಭೂಕುಸಿತ ಪ್ರದೇಶ , ಸವಣಾಲು ಗ್ರಾಮದ ಪಿಲಿಕಲ ರಸ್ತೆ ಭೂಕುಸಿತವಾದ ಪ್ರದೇಶಕ್ಕೆ ಕೇಂದ್ರ ಸರಕಾರದ Ndrf ಮತ್ತು ಜಿಎಸ್ಐ ತಂಡ ಭೇಟಿ

Suddi Udaya

ಬಂದಾರು : ಪೆರ್ಲ -ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

Suddi Udaya

ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಗುರುವಾಯನಕೆರೆ, ಸಂತೆಕಟ್ಟೆ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

Suddi Udaya

ವೇಣೂರು: ವಿ.ಕೆ. ಟ್ರೇಡರ್‍ಸ್ ನೂತನ ಕಾಡುತ್ಪತ್ತಿ ವ್ಯಾಪಾರ ಮಳಿಗೆ ಉದ್ಘಾಟನೆ

Suddi Udaya
error: Content is protected !!