22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೂತನ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಮತ್ತು ತಂಡದ ಪದಪ್ರದಾನ ಸಮಾರಂಭ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೂತನ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಮತ್ತು ತಂಡದ ಪದ ಪ್ರಧಾನ ಸಮಾರಂಭವು ಜ. 6 ರಂದು ಜೆಸಿ ಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಜೆಸಿ ಅಧ್ಯಕ್ಷ ರಂಜಿತ್ ಎಚ್. ಡಿ ವಾರ್ಷಿಕ ವರದಿಯನ್ನು ಮಂಡಿಸಿ ತನ್ನ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು, ಜೇಸಿಯೇತರ ಬಂಧುಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ನೂತನ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಸಭಾದ್ಯಕ್ಷತೆ ವಹಿಸಿ ಮಾತನಾಡಿ ತನ್ನ ಬೆಳವಣಿಗೆಗೆ ಸಹಕರಿಸಿದ ಪೂರ್ವ ಅಧ್ಯಕ್ಷರು ಸದಸ್ಯರನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದರು.ಈ ವರ್ಷ ಘಟಕದಲ್ಲಿ ಮತ್ತು ಬೆಳ್ತಂಗಡಿ ಪರಿಸರದಲ್ಲಿ ನಡೆಸಬೇಕೆಂದುಕೊಂಡ ವ್ಯಕ್ತಿತ್ವ ವಿಕಸನ ಹಾಗೂ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು. ತದನಂತರ ಘಟಕ ಆಡಳಿತ ಮಂಡಳಿಯ 20 ಜನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಲಯ್ಯಾಧ್ಯಕ್ಷ ಜೆಸಿ ಅಭಿಲಾಶ್ ಬಿ. ಎ ಅವರು ನೂತನ 4 ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

2025ರ ಹೊಸ ಜೆಸಿ ವರ್ಷವನ್ನು ಪೂರ್ವಾಧ್ಯಕ್ಷರುಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಮುಖ್ಯ ಅತಿಥಿಗಳು ಮುಂದಿನ ವರ್ಷದ ಕ್ರಿಯಾಯೋಜನೆಯನ್ನು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಲಯ್ಯಾಧ್ಯಕ್ಷ ಜೆಸಿ ಅಭಿಲಾಶ್ ಬಿ.ಎ. ಅವರು ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರು ಸದಸ್ಯರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಶಿಸ್ತಿನ ಘಟಕ ಬೆಳ್ತಂಗಡಿ ಆಗಿದ್ದು ಈ ವರ್ಷ ವಲಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಒಬ್ಬ ಮಹಿಳಾ ಅಧ್ಯಕ್ಷರಾಗಿ ತನ್ನ ಸೃಜನಶೀಲತೆಯಿಂದ ಸದಸ್ಯರೆಲ್ಲರ ಮನ ಗೆದ್ದು ಈ ಘಟಕದಲ್ಲಿ ಸಾಧನೆ ಮಾಡಲಿದ್ದಾರೆ ಎಂದು ಶುಭ ಹಾರೈಸಿದರು.

ಮುಖ್ಯ ಅಬ್ಯಾಗತರಾಗಿ ಆಗಮಿಸಿರುವಂತಹ ಜೆಸಿಐ ಭಾರತದ ಫೌಂಡೇಶನ್ ಡೈರೆಕ್ಟರ್ ಆಗಿರುವಂತ ಅಲನ್ ರೋಹನ್ ವಾಜ್ ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಬೆಳ್ತಂಗಡಿ ಘಟಕದ ನಾಮನಿರ್ದೇಶನದಂತೆ ಕಳೆದ ವರ್ಷ ಜೆಸಿಐ ಭಾರತದಿಂದ ಒಂದು ವರ್ಷದ ಸ್ಕಾಲರ್ಶಿಪ್ ಗೆ ಆಯ್ಕೆಯಾದ ಬಳೆಂಜದ ವಿದ್ಯಾರ್ಥಿನಿ ಬಗ್ಗೆ ಪ್ರಸ್ತಾಪಿಸಿ ಜೆಸಿಐ ಭಾರತ ಅದೆಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೆಸಿಐ ಫೌಂಡೇಶನ್ ನಿಂದ ವಿದ್ಯಾರ್ಥಿವೇತನ ದೊರಕುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡುವುದು ಈ ಘಟಕದ ಕರ್ತವ್ಯವಾಗಿದೆ ಮುಂದೆಯೂ ಈ ಘಟಕಕ್ಕೆ ಹೆಚ್ಚಿನ ವಿದ್ಯಾರ್ಥಿ ವೇತನ ಬರುವಲ್ಲಿ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.

ಜೆಸಿಐ ಭಾರತದ ಆಡಳಿತ ಸಮೀತಿ ಸದಸ್ಯ ಎರ್ಮಾಳ್ ಸುಕುಮಾರ್ ಇವರು ಸಭೆಯನ್ನುದ್ದೇಶಿಸಿ ಜೆಸಿ ಬೆಳ್ತಂಗಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಪೋಷಕರು ಮತ್ತು ಘಟಕದ ಪೂರ್ವ ಅಧ್ಯಕ್ಷರು ತಮ್ಮ ಮಕ್ಕಳನ್ನು ಜೆಸಿ ಆಂದೋಲನಕ್ಕೆ ಕರೆತಂದಲ್ಲಿ ಮಕ್ಕಳಲ್ಲಿ ವಿಶೇಷ ನಾಯಕತ್ವ ಗುಣ ಅದಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬಲ್ಲದು ಜೊತೆಗೆ ಜೇಸಿ ಸಂಸ್ಥೆ ಕೂಡ ದೊಡ್ಡದಾಗಿ ಬೆಳೆಯಬಲ್ಲದು ಎಂದು ಅಭಿಪ್ರಾಯಪಟ್ಟರು. ಹಿಂದಿನ ಅಧ್ಯಕ್ಷರ ಸಾಧನೆ ಮತ್ತು ಮುಂಬರುವ ಅಧ್ಯಕ್ಷರ ಕ್ರಿಯಾ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ನೂತನ ತಂಡದ ಪದ ಪ್ರಧಾನ ಸಮಾರಂಭದಲ್ಲಿ ನಿಕಟಪೂರ್ವಾಧ್ಯಕ್ಷ ಶಂಕರ್ ರಾವ್, ಊರಿನ ಗಣ್ಯರು ನೆರೆಯ ಜೇಸಿ ಘಟಕದ ಬಂಧುಗಳು ಘಟಕದ ಪೂರ್ವ ಅಧ್ಯಕ್ಷರುಗಳು ಸದಸ್ಯರುಗಳು ಸಾಕ್ಷಿಯಾದರು.

ಚಿದಾನಂದ ಇಡ್ಯಾ ಇವರ ವೇದಿಕೆ ಆಹ್ವಾನದೊಂದಿಗೆ ಜೆಸಿ ದೀಕ್ಷಾ ಗಣೇಶ್ ಜೇಸಿ ವಾಣಿ ಉದ್ಘೋಷಿಸಿದರು ಪದಾಧಿಕಾರಿಗಳಾದ ಚಂದ್ರಹಾಸ ಬಳಂಜ, ರಜತ್ ಮೂರ್ತಜೆ, ರಾಮಕೃಷ್ಣ ಶರ್ಮ, ಪೃಥ್ವಿರಾಜ್ ಜೈನ್ ಅತಿಥಿಗಳ ಪರಿಚಯ ವಾಚಿಸಿದರು ಕಾರ್ಯದರ್ಶಿ ಜೇಸಿ ಶೈಲೇಶ್ ಕೆ. ಇವರು ಧನ್ಯವಾದ ಸಮರ್ಪಿಸಿದರು ಅಧ್ಯಕ್ಷರಾದ ಆಶಾಲತಾ ಪ್ರಶಾಂತ್ ಸಭೆಯನ್ನು ಭೋಜನಕೂಟಕ್ಕೆ ಮುಂದೂಡಿದರು.

Related posts

ಮಚ್ಚಿನ ಗ್ರಾಮ ಪಂಚಾಯತ್ ಮಟ್ಟದ 25ನೇ ಜನಸ್ಪಂದನ ಸಭೆ: ನಾಡ ಕಚೇರಿಯ ಬೇಡಿಕೆ – ಚಿರತೆ ಕಾಟದಿಂದ ಜನರಲ್ಲಿ ಆತಂಕ

Suddi Udaya

ಕಡಿರುದ್ಯಾವರ: ಕಾನರ್ಪ ಎಂಬಲ್ಲಿ ಕಾಡಾನೆ ದಾಳಿ, ಕೃಷಿ ನಾಶ

Suddi Udaya

ಹತ್ಯಡ್ಕ: ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ. ಪ್ರಾ. ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

Suddi Udaya

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಲರ್ಸ್ ವತಿಯಿಂದ ದಯಾ ವಿಶೇಷ ಶಾಲೆಗೆ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!