23.5 C
ಪುತ್ತೂರು, ಬೆಳ್ತಂಗಡಿ
January 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.12: ಮುಂಡಾಜೆಯಲ್ಲಿ ಸಾವಿರದ ಸಾಧಕರು ಮನೆಮನದ ಸಮ್ಮಾನ:

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅಸಂಖ್ಯಾತ ಸಾಧಕರ ತವರೂರು. ವಿವಿಧ ಕ್ಷೇತ್ರಗಳಲ್ಲಿ ಮೌನಕ್ರಾಂತಿ ಸಾಧಿಸುತ್ತ, ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ಶ್ರೇಷ್ಠ ಸಾಧಕರು ನಮ್ಮ ತಾಲೂಕಿನಲ್ಲಿದ್ದು ಅವರ ಅನ್ವೇಷಣೆಯ ಮಹಾಭಿಯಾನವೇ
“ಸಾವಿರದ ಸಾಧಕರು” ಮನೆಮನದ ಸಮ್ಮಾನ ಎಂದು ಸಂಸ್ಕಾರ ಭಾರತೀ ಬೆಳ್ತಂಗಡಿ ಘಟಕದ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿದರು.

ಅವರು ಜ.8ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಂಸ್ಕಾರ ಭಾರತೀ ಮಂಗಳೂರು ಇದರ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸುವ ಸಾವಿರದ ಸಾಧಕರು ಕಾರ್ಯಕ್ರಮವು ಮುಂಡಾಜೆಯ ಸನ್ಯಾಸಿಕಟ್ಟೆ ಪರಶುರಾಮ ಕ್ಷೇತ್ರದಲ್ಲಿ ಜ.12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಚಾಲನೆ ನೀಡಿ ತಾಲೂಕಿನ 1 ಸಾವಿರ ಸಾಧಕರನ್ನು ಗುರುತಿಸಿ ಪ್ರತಿ ಗ್ರಾಮದ ಸಾಧಕ ಬಂಧುಗಳ ಮನೆಗೆ ಭೇಟಿ ನೀಡಿ ಅವರಿಗೆ “ಬೆಳ್ತಂಗಡಿಯ ಬೆಳಕು” ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿಲಾಗುವುದು ಎಂದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾ.ಸ್ವ.ಸೇ. ಸಂಘದ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮುಂಡಾಜೆ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಗೋಖಲೆ ಉಪಸ್ಥಿತರಿರುವರು. ಸಮಾರೋಪ ಸಮಾರಂಭವು ಅನಂತ್ ಭಟ್ ಮಚ್ಚಿಮಲೆ ಯವರ ನಿವಾಸದಲ್ಲಿ ನಡೆಯಲಿದ್ದು ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಮುಖ್ಯ ಅತಿಥಿಯಾಗಿ ಸೋಮಂತಡ್ಕ ಪಂಚಶ್ರೀ ಗ್ರೂಪ್ಸ್ ನ ನಾರಾಯಣ ಗೌಡ ಭಾಗವಹಿದಲಿದ್ದಾರೆ ಎಂದರು.

ಸಾವಿರದ ಸಾಧಕರು ಪ್ರಶಸ್ತಿ ಪುರಸ್ಕೃತರು – ಗ್ರಾಮ ಮುಂಡಾಜೆ

ಮೇಜರ್ ಜನರಲ್ ಎಮ್. ವಿ. ಭಟ್- ದೇಶ ಸೇವೆ, ಶ್ರೀಮತಿ ಯಮುನಾ – ನಾಟಿ ವೈದ್ಯೆ,ಶ್ರೀಮತಿ ಅಪ್ಪಿ ನ್ಯಾಕ – ಜನಪದ ಕ್ಷೇತ್ರ, ಶ್ರೀಮತಿ ಸೇಸಮ್ಮ- ನಾಟಿವೈದ್ಯೆ, ಅಡೂರು ವೆಂಕಟ್ರಾಯ – ಸಾಮಾಜಿಕ ಕ್ಷೇತ್ರ, ಬಾಬು ಗೌಡ ಮತ್ತು ಶ್ರೀಮತಿ ವಿಜಯಮ್ಮ – ಶೈಕ್ಷಣಿಕ ಕ್ಷೇತ್ರ, ಶ್ರೀಧರ್ ಭಿಡೆ – ಸಹಕಾರಿ / ಶೈಕ್ಷಣಿಕ, ನೇಮು ಶೆಟ್ಟಿ- ಸಣ್ಣ ವ್ಯಾಪಾರ ಕ್ಷೇತ್ರ, ಅನಂತ್ ಭಟ್ ಮಚ್ಚಿಮಲೆ – ಸಾಮಾಜಿಕ ಕ್ಷೇತ್ರ, ಕೊರಗಪ್ಪ ನ್ಯಾಕ -ರಾಜಕೀಯ ಕ್ಷೇತ್ರ, ಚಂದ್ರಮೋಹನ್ ಮಾರಾಟೆ – ಯಕ್ಷಗಾನ ಸಂಘಟಕ, ಅಗರಿ ರಾಮಣ್ಣ ಶೆಟ್ಟಿ ಸಮಾಜ ಸೇವೆ, ಗಣೇಶ್ ಬಂಗೇರ – ದೈವಾರಾಧನೆ, ಕಜೆ ವೆಂಕಟೇಶ್ ಭಟ್ -ಧಾರ್ಮಿಕ ಕ್ಷೇತ್ರ, ಕೀರ್ತನಾ ಕಲಾ ತಂಡ – ಸಾಂಸ್ಕೃತಿಕ ಸೇವೆ, ಯಾಂಕ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ – ಕ್ರೀಡಾ ಸಂಘಟನೆ, ಸಚಿನ್ ಭಿಡೆ – ಸಾಮಾಜಿಕ ಕ್ಷೇತ್ರ.

ಪತ್ರಿಕಾಗೋಷ್ಠಿಯಲ್ಲಿ ಮುಂಡಾಜೆ ಕೀರ್ತನಾ ಕಲಾ ತಂಡದ ಸಂಚಾಲಕ ಸದಾನಂದ ಬಿ ಮುಂಡಾಜೆ, ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು. ಸಾವಿರದ ಸಾಧಕರು ಕಾರ್ಯಕ್ರಮದ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ಸಂಸ್ಕಾರ ಭಾರತೀ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಅಶೋಕ್ ಧನ್ಯವಾದವಿತ್ತರು.

Related posts

ಬೆಳಾಲು ಶ್ರೀ ಧ. ಮಂ.ಪ್ರೌ. ಶಾಲೆಯಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಪರಿಸರ ದಿನಾಚರಣೆ

Suddi Udaya

ನಾರಾವಿ: ಶ್ರೀಮತಿ ಯಮುನಾ ಬಾಂದೋಟ್ಟು ನಿಧನ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಬೆಳ್ತಂಗಡಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಅರಸಿನಮಕ್ಕಿ: ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ವಾತ್ಸಲ್ಯ ಮನೆ ನಿರ್ಮಾಣದ ಶ್ರಮದಾನ

Suddi Udaya

ಅರಸಿನಮಕ್ಕಿ ವಲಯ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಕ್ಕೆ ವಾರ್ಷಿಕ ಲೆಕ್ಕ ಪರಿಶೋಧನೆಯ ಗ್ರೇಡಿಂಗ್ ಪತ್ರ ವಿತರಣೆ

Suddi Udaya
error: Content is protected !!