ಧರ್ಮಸ್ಥಳ: ಶ್ರೀ ಕ್ಷೇತ್ರದ ವತಿಯಿಂದ, ಕ್ಷೇತ್ರದ ಧರ್ಮಾಧಿಕಾರಿಗಳು ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಧ್ಯಕ್ಷರಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಅಂಗನವಾಡಿ ಕೇಂದ್ರ ಶಿಬರಾಜೆಯ ಆವರಣ ಗೋಡೆ ರಚನೆಗೆ ಮಂಜೂರು ಮಾಡಿರುವ ರೂ. 30,000/- ಮೊತ್ತದ ಮಂಜೂರಾತಿ ಪತ್ರವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರರವರು ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರತಿಮಾರವರಿಗೆ ಮಂಜೂರಾತಿ ಪತ್ರವನ್ನು ಸಮಿತಿಯ ಪ್ರಮುಖರು ಹಾಗೂ ಗಣ್ಯರು ಮತ್ತು ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಹತ್ತಾಂತರಿಸಲಾಯಿತು.
ಈ ಸಂದರ್ಭ ಕಳೆಂಜ ಗ್ರಾಮ ಪಂಚಾಯಿತಿಯ ಸದಸ್ಯರಾದ ಟಿ ಎಸ್ ನಿತ್ಯಾನಂದ ರೈ, ಗ್ರಾಮ ಪಂಚಾಯತಿಯ ಸದಸ್ಯರಾದ ಪ್ರೇಮ ಬಿ ಎಸ್, ಸದಾಶಿವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀಧರ್ ರಾವ್, ಬಾಲವಿಕಾಸ ಸಮಿತಿಯ ಸದಸ್ಯರಾದ ಪಿಟಿ ಸೆಬಾಸ್ಟೀನ್, ಬಾಲ ವಿಕಾಸ ಸಮಿತಿಯ ಸದಸ್ಯರಾದ ಸೇವ್ರಿನ್, ಬಾಲವಿಕಾಸ ಸಮಿತಿಯ ಸದಸ್ಯೆ ವೇದಾವತಿ, ಕೊಕ್ಕಡ ಜೆಸಿಐ ಅಧ್ಯಕ್ಷ ಸಂತೋಷ್ ಜೈನ್, ಬಾಲ ವಿಕಾಸ ಸಮಿತಿಯ ಸದಸ್ಯರಾದ ಜಯವರ್ಮ ಜೈನ್, ಪ್ರಗತಿ ಬಂದು ಸ್ವ-ಸಹಾಯಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆಯಾದ ಪ್ರಿಯ, ಅಂಗನವಾಡಿ ಸಹಾಯಕಿ ಅನ್ಸಿಲ್ಲ, ಶಿಬರಾಜೆಯ ಆಶಾ ಕಾರ್ಯಕರ್ತೆ ಮೀನಾಕ್ಷಿ,ಮೇಲ್ವಿಚಾರಕ ರವೀಂದ್ರ, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಉಪಸ್ಥಿತರಿದ್ದರು.