April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಬೆಳ್ತಂಗಡಿ : ಹಳೆಕೋಟೆಯಲ್ಲಿ ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಶುಭಾರಂಭ

ಬೆಳ್ತಂಗಡಿ: ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಉದ್ಘಾಟನಾ ಸಮಾರಂಭವು ಜ.11 ರಂದು ಹಳೆಕೋಟೆ ವಾಣಿ ಕಾಲೇಜು ಎದುರುಗಡೆ ಆಧ್ಯ ಕಾಂಪ್ಲೆಕ್ಸ್ (ಪ್ರಥಮ ಮಹಡಿ) ನಲ್ಲಿ ಶುಭಾರಂಭಗೊಂಡಿದೆ.

ಉದ್ಘಾಟನೆಯನ್ನು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಪ್ರೋ| ಸುರೇಶ್ ನೇರೆವೇರಿಸಿ ಶುಭಕೋರಿದರು. ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬೆಳ್ತಂಗಡಿ ಇಕೋ ಪ್ರೇಶ್ ಮಾಲಕರು ರಾಕೇಶ್ ಹೆಗ್ಡೆ ದೀಪ ಪ್ರಜ್ವಲನೆ ನೆರವೇರಿಸಿ ಶುಭಹಾರೈಸಿದರು.

ಬೆಳ್ತಂಗಡಿ ಬ್ಯೂಟಿಪಾರ್ಲರ್ ಅಸೋಸಿಯೇಶನ್ ಅಧ್ಯಕ್ಷೆ ರಮ್ಮೀತಾ ಆಳ್ವ , ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥರು ಶಂಕರ ರಾವ್, ಹಳೆಕೋಟೆ ಆಧ್ಯ ಕಾಂಪ್ಲೆಕ್ಸ್‌ ಮಾಲಕರು ಅಶ್ವತ್ಥ ಕುಮಾರ್ ದೀಪ ಪ್ರಜ್ವಲನೆಗೊಳಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾಂತಾ ಬಂಗೇರ ಪ್ರಶಾಂತಿ ಬ್ಯೂಟಿ ಪಾರ್ಲರ್, ಜೋರ್ಡನ್ ರೀವರ್ ಫ್ಯಾಮೀಲಿ ರೆಸ್ಟೋರೆಂಟ್ ಮಾಲಕರು ಅಶ್ವಿನಿ ಡಿಸೋಜ, ಬೆಳ್ತಂಗಡಿ ಟೈಲರಿಂಗ್ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದು, ಶುಭಹಾರೈಸಿದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಜಯಮಾಲಾ ಯೋಗೀಶ್ ಸ್ವಾಗತಿಸಿ, ಸತ್ಕರಿಸಿದರು.

Related posts

ಧರ್ಮಸ್ಥಳ: ಸಿರಿ ಸಂಸ್ಥೆಯ 2025ನೇವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ

Suddi Udaya

ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಇದರ ಅಧ್ಯಕ್ಷರಾಗಿ ಕೆ ಹನೀಫ್ ಪುನರಾಯ್ಕೆ

Suddi Udaya

ಶ್ರೀ ವೀರಾಂಜನೇಯ ಸೇವಾ ಸಮಿತಿ ಸಂಸ್ಥೆಯಿಂದ ದಿನನಿತ್ಯ ಬಳಕೆಯ ನೆರವು ಕಾರ್ಯಕ್ರಮ

Suddi Udaya

ಸೌಜನ್ಯ ಪ್ರಕರಣ : ನಡ ಮತ್ತು ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಚಿತ್ರಕಲಾ ಗ್ರೇಡ್ ಪರೀಕ್ಷೆ: ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ

Suddi Udaya

ಜ.14-23: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!