24.4 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಮೃತ ಸೋಮೇಶ್ವರರವರ ನೆನಪಿಗೆ ‘ಅಮೃತ ಮಥನ’ ಕಾರ್ಯಕ್ರಮ

ಬೆಳ್ತಂಗಡಿ: ಅಮೃತ ಸೋಮೇಶ್ವರ ಅವರು ಸದಾ ಮಾನವೀಯತೆಯ ಪರವಾಗಿದ್ದರು. ವಿಶ್ವ ಮಾನವ ಕಲ್ಪನೆ ಅವರ ಉಸಿರಾಗಿತ್ತು ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ತಿಳಿಸಿದರು.

ಬೆಳ್ತಂಗಡಿಯಲ್ಲಿ ಜರುಗಿದ ಅಮೃತ ಸೋಮೇಶ್ವರ ಅವರ ನೆನಪಿನ ಕಾರ್ಯಕ್ರಮ ‘ಅಮೃತ ಮಥನ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರಿಗೂ ಗೌರವದ ಬದುಕು ಸಿಗಬೇಕು ಎನ್ನುವುದರ ಬಗ್ಗೆ ಅವರು ಖಚಿತ ನೋಟವನ್ನು ಹೊಂದಿದ್ದರು. ಅವರ ಸಾಹಿತ್ಯ ಇದನ್ನೇ ಪ್ರತಿಪಾದಿಸುತ್ತದೆ. ತುಳು ಸಾಹಿತ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿದ ತಿರುವು ಅಸಾಧಾರಣವಾದದ್ದು ಎಂದರು.

ತಂದೆಯ ವ್ಯಕ್ತಿತ್ವ ಹಾಗೂ ಸಾಹಿತ್ಯದ ಅವಲೋಕನ ನಡೆಸಿದ ಡಾ. ಚೇತನ ಸೋಮೇಶ್ವರ ಅವರು ತಂದೆ ಮೌನಿ ಆದರೆ ಸಮಾಜದ ಅನ್ಯಾಯದ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಅವರ ಬರಹಗಳು ಒಂದು ರೀತಿಯಲ್ಲಿ ಸಾರ್ವಜನಿಕ ಆಸ್ತಿಯಾಗಿತ್ತು. ಜನಸಾಮಾನ್ಯರು ಇವರ ಗೀತೆಗಳನ್ನು ತಮ್ಮ ಬದುಕಿನ ಪ್ರತಿಬಿಂಬ ಎಂದು ಭಾವಿಸಿದ್ದರು ಎಂದರು.

ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಅವರು ಅಮೃತ ಸೋಮೇಶ್ವರ ಅವರ ರಂಗ ನಾಟಕಗಳ ಬಗ್ಗೆ ಮಾತನಾಡಿ ತುಳು ರಂಗಭೂಮಿಗೆ ಹೊಸತನ ದೊರಕಿದ್ದು ಅಮೃತರ ರಚನೆಗಳಿಂದ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಅವರು ತಮ್ಮ ಮಾವನವರ ಮಾನವೀಯ ಗುಣವನ್ನು ಸ್ಮರಿಸಿದರು.

ಸಮಾಜ ವಿಜ್ಞಾನಿ ಪ್ರಕಾಶ ಭಟ್, ಚರಣ್ ಕುಮಾರ್, ನರೇಂದ್ರ ರೈ ದೇರ್ಲ, ಜಿತು ನಿಡ್ಲೆ, ಡಾ. ಉದಯಚಂದ್ರ, ಡಾ. ರವಿನಾರಾಯಣ ಚಕ್ರಕೋಡಿ ಮಾತನಾಡಿದರು

ಬೆಳ್ತಂಗಡಿಯಲ್ಲಿ ಜರುಗಿದ ‘ಅಮೃತ ಮಥನ’ ಕಾರ್ಯಕ್ರಮದಲ್ಲಿ ಅಮೃತ ಸೋಮೇಶ್ವರ ಅವರ ನುಡಿಗಳ ಫಲಕವನ್ನು ಅನಾವರಣ ಮಾಡಲಾಯಿತು. ರಾಜೇಶ್ವರಿ ಚೇತನ್, ಪ್ರಕಾಶ ಭಟ್, ಚೇತನ್ ಸೋಮೇಶ್ವರ, ವಿದ್ದು ಉಚ್ಚಿಲ್, ಜಿ ಎನ್ ಮೋಹನ್ ಹಾಜರಿದ್ದರು

Related posts

ಎಕ್ಸೆಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ನೀಟ್ ಟಾಪರ್ 720 ಅಂಕಗಳ ಪೈಕಿ 710 ಪಡೆದ ಪ್ರಜ್ವಲ್ ಗೆ ಸಂಸ್ಥೆಯ ವತಿಯಿಂದ ರೂ. 10 ಲಕ್ಷ ಕ್ಯಾಶ್ ಪ್ರೈಜ್ ಜೊತೆಗೆ ಗೌರವಾರ್ಪಣೆ

Suddi Udaya

ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ರಾಜ್ಯಮಟ್ಟದ ಡಿಸ್ಕಸ್ ಥ್ರೋ: ಬಳಂಜದ ಸುಷ್ಮಾ ಬಿ ಪೂಜಾರಿ ಪ್ರಥಮ

Suddi Udaya

ಪದ್ಮುoಜ : ಬಂದಾರು, ಮೊಗ್ರು,ಕಣಿಯೂರು, ಉರುವಾಲು, ಇಳoತಿಲ ಶಕ್ತಿಕೇಂದ್ರ ಚುನಾವಣಾ ಅವಲೋಕನ ಸಭೆ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಕಲಾನಿಕಾಯದ ಡೀನ್ ಡಾ. ಶ್ರೀಧರ ಭಟ್ಟ ರವರಿಗೆ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ

Suddi Udaya
error: Content is protected !!