23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯಲ್ಲಿ ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಯುವದಿನ ಸಂಪನ್ನ

ಉಜಿರೆ: ನಮ್ಮ ದೇಶದ ಸಂಸ್ಕೃತಿ, ಆಧ್ಯಾತ್ಮಿಕತೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿ ಭಾರತದ ಬಗ್ಗೆ ಕೀಳು ಭಾವನೆ ಹೊಂದಿದ್ದ ಪಾಶ್ಚಾತ್ಯರು ನಮ್ಮೆಡೆಗೆ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು.

ಅಜ್ಞಾನವೇ ದೌರ್ಬಲ್ಯ ; ದೌರ್ಬಲ್ಯವೇ ಸೋಲಿನ ಮೂಲ. ಆದ್ದರಿಂದ ಸರಿಯಾದ ಶಿಕ್ಷಣವನ್ನು ಪಡೆದು ಪ್ರಬುದ್ಧರಾಗಬೇಕು ಹಾಗೂ ಹಕ್ಕಿಯೊಂದು ಸರಿಯಾಗಿ ಹಾರಬೇಕೆಂದರೆ ಅದರ ಎರಡೂ ರೆಕ್ಕೆಗಳು ಬಲಿಷ್ಠವಾಗಿರಬೇಕು. ಒಂದು ರೆಕ್ಕೆ ಪುರುಷನಾದರೆ ಇನ್ನೊಂದು ಸ್ತ್ರೀ ಆಗಿರಬೇಕು. ಸ್ತ್ರೀ ಸಮಾನತೆಗೆ ಮಹತ್ವ ಕೊಡುವ ದೇಶ ಮಾತ್ರ ಸರ್ವಾಂಗೀಣ ಪ್ರಗತಿ ಸಾಧಿಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.

ಯುವಶಕ್ತಿ ದೇಶದ ಶಕ್ತಿ. ಸತ್ಯ ಮತ್ತು ಧೈರ್ಯದಿಂದ ಸಾಧನೆ ಮಾಡಬೇಕು. ವಿದ್ಯಾರ್ಥಿ ಸಮುದಾಯ ದುಶ್ಚಟ ಮತ್ತು ಆಕರ್ಷಣೆಗಳಿಂದ ವಿಮುಖರಾಗಿ ಸ್ವಾಮಿ ವಿವೇಕಾನಂದರು ಯುವಕರಿಗೆ ನೀಡಿದ ಅದ್ಭುತ ಸಂದೇಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಲ್ಲಿ ತಮ್ಮ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಮನೋಹರ ಶೆಟ್ಟಿ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಯುವದಿನದ ಸಂದೇಶ ನೀಡಿದರು.

ಸದ್ಭಾವನೆಯ ಗೋಡೆಯಾದ ಎಸ್ ಡಿ ಎಂ ವಾಲ್ ಆಫ್ ಗುಡ್ ವಿಲ್ ಇದಕ್ಕೆ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ಗ್ರಂಥಪಾಲಕ ಮನೋಹರ ಶೆಟ್ಟಿ , ಘಟಕದ ನಾಯಕ ಆದಿತ್ಯ ವಿ , ನಾಯಕಿ ಪ್ರಾಪ್ತಿ ಗೌಡ ಹಾಗೂ ಸ್ವಯಂ ಸೇವಕರು ಅಗತ್ಯ ವಸ್ತುಗಳನ್ನು ನೀಡಿದರು.
ಯುವದಿನದ ಅಂಗವಾಗಿ ಸ್ವಯಂ ಸೇವಕರು ಉಜಿರೆ ಪರಿಸರದ ಸ್ವಚ್ಛತಾ ಕಾರ್ಯವನ್ನು ಸಹ ಮಾಡಿದರು.

ಸ್ವಯಂ ಸೇವಕರಾದ ರಾಶಿಕ ಸ್ವಾಗತಿಸಿ , ವಿನೋದ್ ವಂದಿಸಿದರು. ಮೌಲ್ಯ ನಿರೂಪಿಸಿದರು

Related posts

ಆರಂಬೋಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಬಿರ್ವೆರ್ ಕುಡ್ಲದ ಸ್ಥಾಪಕ ,ಯುವ ನಾಯಕ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಮತಪ್ರಚಾರ

Suddi Udaya

ಉಜಿರೆ ಗೌಸಿಯ ಯಂಗ್ ಮೆನ್ಸ್ ನ ನೂತನ ಅಧ್ಯಕ್ಷರಾಗಿ ಸಯ್ಯದ್ ಝೈನುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಇಕ್ಬಾಲ್ ಉಜಿರೆ ಆಯ್ಕೆ

Suddi Udaya

ಪಂಚಾಯತ್‌ ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರುನಲ್ಲಿ ಗ್ರಾಮ ಪಂಚಾಯತ್ ನೌಕರರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

Suddi Udaya

ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 79 ನೇ ಹುಟ್ಟುಹಬ್ಬ ಪ್ರಯುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ: ಜ. 15 ರಂದು ಬಂಗೇರ ಬ್ರಿಗೇಡ್ ನಿಂದ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಪಂದ್ಯಕೂಟ ಆಯೋಜನೆ: ಬಂಗೇರ ಬ್ರಿಗೇಡ್ ಗೌರವಾಧ್ಯಕ್ಷೆ ಪ್ರೀತಿತಾ ಬಂಗೇರರವರಿಂದ ಪತ್ರಿಕಾಗೋಷ್ಠಿ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಗೆ ವಿಮಾ ಕ್ಷೇತ್ರದ ಗೌರವ

Suddi Udaya

ಫೆ.19: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವದ ಮಹಾರಥೋತ್ಸವದ ಪ್ರಯುಕ್ತ ‘ಬೆಳ್ತಂಗಡಿ ಮ್ಯೂಸಿಕಲ್ ನೈಟ್ಸ್’ ಹಾಗೂ ಬೀಟ್ ರಾಕರ್ಸ್ ಡ್ಯಾನ್ಸ್ ಇವರಿಂದ ಡಾನ್ಸ್ ಫ್ಲೇಮ್

Suddi Udaya
error: Content is protected !!