ವೇಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವೇಣೂರು ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ರಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲಿದ್ದಾರೆ.
ಬಿಜೆಪಿ ನಾಯಕ, ವೇಣೂರು ಸಿಎ ಬ್ಯಾಂಕಿನ ಹಾಲಿ ಅಧ್ಯಕ್ಷ ಸುಂದರ ಹೆಗ್ಡೆ ಇವರ ನೇತೃತ್ವದ ಸಹಕಾರ ಭಾರತಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸಿ ಗೆಲುವು ದಾಖಲಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಚುನಾವಣೆಯು ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದು ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುಂದರ ಹೆಗ್ಡೆ,ರಾಮದಾಸ್ ನಾಯಕ್,ಸಂದೀಪ್ ಹೆಗ್ಡೆ,ರತ್ನಾಕರ ಬಿ,ಪ್ರವೀಣ್ ಪೂಜಾರಿ,ಕೃಷ್ಣಪ್ಪ ಮೂಲ್ಯ,ನಾಗಪ್ಪ,ರಾಜು ನಾಯ್ಕ,ಪ್ರಶಾಂತ್ ಪೂಜಾರಿ,ಎಂ.ಆರ್ ಸಂತೋಷ್,ಆಶಾ ಸುಂದರ್,ರೋಹಿಣಿ ಪ್ರಕಾಶ್ ಜಯಗಳಿಸಿದರು.ಕಾಂಗ್ರೇಸ್ ಬೆಂಬಲಿತಾ ಅಭ್ಯರ್ಥಿಗಳಾದ ಸೇಸ,ವಿಮಲ ನಾಯ್ಕ,ಲಕ್ಷ್ಮಣ ಪೂಜಾರಿ,ತೋಮಸ್ ಆರ್ ನೊರೊನ್ನ,ಗುಣವತಿ,ಸೂರ್ಯಪ್ರಭಾ,ಚಂದಪ್ಪ ಮೂಲ್ಯ,ದಯಾನಂದ ದೇವಾಡಿಗ,ದೇಜಪ್ಪ ಶೆಟ್ಟಿ ಪಿ,ಲಕ್ಷ್ಮಣ ಪಿ,ವಿಶ್ವನಾಥ ಪೂಜಾರಿ,ಹರೀಶ್ ಕುಮಾರ್ ಪೊಕ್ಕಿ ಪರಜಯಗೊಂಡರು.
ಜ. 12 ರಂದು ಚುನಾವಣೆ ನಡೆದಿದೆ. ಚುನಾವಣಾಧಿಕಾರಿಯಾಗಿ ಪ್ರತಿಮಾ ಸಹಕರಿಸಿದರು.ವೇಣೂರು ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.ಶಾಸಕ ಹರೀಶ್ ಪೂಂಜ,ಜಯಂತ್ ಕೋಟ್ಯಾನ್ ಹಾಗೂ ಇತರರು ಆಗಮಿಸಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಫಲಿತಾಂಶವನ್ನು ಹೈಕೋರ್ಟ್ ಆದೇಶದ ಬಳಿಕ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.