26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಲಾಯಿಲ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಲಾಯಿಲ ಇದರ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆಯು ಡಿ.31 ಕರ್ನೋಡಿ ಶಾಲೆಯಲ್ಲಿ ನಡೆಯಿತು.

ಕಾರ್ಯದರ್ಶಿ ಪ್ರಶಾಂತ್ ಇವರು ಸಂಘದ ವತಿಯಿಂದ ನಡೆದ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬಿಕೆ ಧನಂಜಯ ರಾವ್, ಗೌರವ ಸಲಹೆಗಾರರಾಗಿ ಬಿ.ಕೆ ಸಂತೋಷ್ ಕುಮಾರ್ ಲಾಯಿಲ, ಸುನಿಲ್ ಶೆಣೈ, ವಿಶ್ವನಾಥ್ ಲಾಯಿಲ, ಸೀತಾರಾಮ ಹೆಗ್ಡೆ ಆದರ್ಶ ನಗರ, ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ರಾಘವೇಂದ್ರ ನಗರ, ಕಾರ್ಯದರ್ಶಿಯಾಗಿ ಗಣೇಶ್. ಆರ್ ಲಾಯಿಲ , ಉಪಾಧ್ಯಕ್ಷರಾಗಿ ಸುರೇಶ್ ಬೈರ ಪುತ್ರಬೈಲ್, ಪವನ್ ಗಾಂಧಿನಗರ, ಅನಿಲ್ ಕಕ್ಕೇನ, ಮುಸ್ತಕ್ ಕಾಶಿಬೆಟ್ಟು, ಜಾನ್ಸನ್ ಕೊಪ್ಪದಬೈಲ್ , ಕೋಶಾಧಿಕಾರಿಯಾಗಿ ಸದಾಶಿವ ಸಮಗಾರ ಕಕ್ಕೇನ, ಜೊತೆ ಕಾರ್ಯದರ್ಶಿಯಾಗಿ ಶಶಿಕಾಂತ್ ಕವಟ್ಟೆ, ರಮ್ಯಾ ಪುತ್ರಬೈಲು, ಕ್ರೀಡಾ ಕಾರ್ಯದರ್ಶಿಯಾಗಿ ನಾಗೇಶ್ ಹೆಗ್ಡೆ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಝ್ ಪುತ್ರಬೈಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪುಷ್ಪರಾಜ್ ಲಾಯಿಲ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಶಿಕುಮಾರ್ ಅಯೋಧ್ಯ ನಗರ ಆಯ್ಕೆಯಾದರು.

ಮುಖ್ಯ ಉಪಧ್ಯಾಯರಾದ ಜಗನಾಥ್.ಎಂ ಇವರು ನೂತನ ಸಮಿತಿಯ ಪದಾಧಿಕಾರಿಗಳಿಗೆ ಶುಭಾಶಯ ಕೊರುವುದರೊಂದಿಗೆ ಶಾಲೆಯಲ್ಲಿ ನಡೆಯಬೇಕಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಬೇಡಿಕೆ ಸಲ್ಲಿಸಿದರು. ಗೌರವಾಧ್ಯಕ್ಷರಾದ ಧನಂಜಯ ರಾವ್ ಮಾತನಾಡಿ ಸಂಘದಿಂದ ಮುಂದೆ ನಡೆಯಬೇಕಾದ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ವಿವರಿಸಿದರು. ಸ್ಥಾಪಕದ್ಯಕ್ಷರಾದ ಸಂತೋಷ್ ಕುಮಾರ್ ಮಾತನಾಡಿ ಸಂಘ ನಡೆದು ಕೊಂಡುಬಂದ ಬಗ್ಗೆ ವಿವರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಸಂಘದ ಅಜೀವ ಸದಸ್ಯತ್ವವನ್ನೂ ಹೆಚ್ಚು ಮಾಡುವ ಕಡೆ ಗಮನ ಹರಿಸುವಂತೆ ಪದಾಧಿಕಾರಿಗಳಿಗೆ ಸೂಚಿಸಿದರು.ನೂತನ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಮಾತನಾಡಿ ಸಂಘದ ಪದಾಧಿಕಾರಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ ಕೋರಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸೇರಿ ಒಟ್ಟು 10 ಹಳೆ ವಿದ್ಯಾರ್ಥಿಗಳು ಸಂಘದ ಅಜೀವ ಸದಸ್ಯರಾಗಿ ಸೇರ್ಪಡೆ ಗೊಂಡರು.

ನೂತನ ಕಾರ್ಯದರ್ಶಿ ಗಣೇಶ್ ಆರ್ ಸ್ವಾಗತಿಸಿ, ನಿಕಟ ಪೂರ್ವ ಕಾರ್ಯದರ್ಶಿ ಜೆಸಿ ಪ್ರಶಾಂತ್ ಗಾಂಧಿನಗರ ಧನ್ಯವಾದವಿತ್ತರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ: ವಿವಿಧ ಸಮಿತಿಗಳ ರಚನೆ -ಸಂಚಾಲಕ ಹಾಗೂ ಉಪಸಂಚಾಲಕರ ಆಯ್ಕೆ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ಚೀಟಿ ಬಿಡುಗಡೆ

Suddi Udaya

ಕರ್ನಾಟಕದ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲ: ವಿಧಾನಪರಿಷತ್ ಶಾಸಕ ಕೆ‌.ಪ್ರತಾಪ್ ಸಿಂಹ ನಾಯಕ್ ಆರೋಪ

Suddi Udaya

ಜೂ. 3: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಉಚಿತ ಪ್ರದರ್ಶನ

Suddi Udaya

ಭಾರೀ ಮಳೆಗೆ ತುಂಬಿ ಹರಿದ ಅಂಬಡೆಬೆಟ್ಟು ಸೇತುವೆ ನದಿ

Suddi Udaya

ಬೆಳ್ತಂಗಡಿ ತಾಲೂಕಿನ ವಿವಿಧ ಮತಗಟ್ಟೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!