ಕಲ್ಮಂಜ : ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರದ್ದಾ ಕೇಂದ್ರದಡಿಯಲ್ಲಿ ಪಜಿರಡ್ಕ ದೇವಸ್ಥಾನದ ಆವರಣದ ಸ್ವಚ್ಛತೆ ಕಾರ್ಯಕ್ರಮವು ಜ.12 ರಂದು ನಡೆಯಿತು.
ಈ ಸಂದರ್ಭದಲ್ಲಿ ಸತ್ಯನಪಳಿಕೆ ಒಕ್ಕೂಟ ಅಧ್ಯಕ್ಷರು, ಪಜಿರಡ್ಕ ದೇವಸ್ಥಾನದ ಮಾಜಿ ಅಧ್ಯಕ್ಷರುಗಳಾದ ಕೃಷ್ಣಪ್ಪ ಗುಡಿಗಾರ್, ತುಕಾರಾಮ ಸಾಲಿಯಾನ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರವಿಕುಮಾರ್ ಭಟ್, ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ, ಸತ್ಯನಪಲಿಕೆ ಒಕ್ಕೂಟದ ಸದಸ್ಯರು, ಶೌರ್ಯ ಘಟಕದ ಸ್ವಯಂಸೇವಕರು, ಊರಿನ ಗ್ರಾಮಸ್ಥರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.