37.6 C
ಪುತ್ತೂರು, ಬೆಳ್ತಂಗಡಿ
January 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೊಯ್ಯೂರು ಸ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ ಹಾಗೂ ಸುಜ್ಞಾನ ಬಯಲು ರಂಗಮಂದಿರ ಉದ್ಘಾಟನೆ

ಕೊಯ್ಯೂರು : ಕೊಯ್ಯೂರು ಸ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ ಮತ್ತು ಸುಜ್ಞಾನ ಬಯಲು ರಂಗಮಂದಿರ ಉದ್ಘಾಟನೆಯನ್ನು ಕೊಯ್ಯೂರು ಶ್ರೀ ಪಂಚಾದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಬಾಂಗಿಣ್ಣಾಯ ಅಗ್ರಸಾಲೆ ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ, ಪೋಷಕರ ಮತ್ತು ವಿದ್ಯಾರ್ಥಿಗಳ ಪಾತ್ರ ಬಹಳ ಮಹತ್ತರವಾದುದು. ಹಿರಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಶಾಲೆಯು ಅಭಿವೃದ್ಧಿಯನ್ನು ಹೊಂದಲು ಸಾಧ್ಯ ಎಂಬುದಾಗಿ ಹೇಳಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಯ್ಯೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ದಯಾಮಣಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ವಿಶಾಲಾಕ್ಷಿ, ಶಾರದಾ, ಶಿಕ್ಷಣ ಸಂಯೋಜಕರಾದ ಚೇತನಾಕ್ಷಿ, ಬೆಳ್ತಂಗಡಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜ, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಗೌಡ ವಾದ್ಯಕೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ ಕೃಷ್ಣ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮಲಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುರಂದರ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆ, ಶಾಲಾ ವಿದ್ಯಾರ್ಥಿ ನಾಯಕ ಮಾಸ್ಟರ್ ಕಾರ್ತಿಕ್, ಅಶೋಕ್ ಮತ್ತು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಚಂಪಾ ಮೊದಲಾದವರು ಉಪಸ್ಥಿತರಿದ್ದರು.

Related posts

ಕಾಪು-ಉಪರಡ್ಕ ದೈವಗಳ ವಾರ್ಷಿಕ ಜಾತ್ರೆಗೆ ಚಾಲನೆ

Suddi Udaya

ಚಾರ್ಮಾಡಿ : ಅನ್ನಾರ್ ನದಿಯ ಸೇತುವೆಯ ಅಡಿಯಲ್ಲಿ ದನದ ತಲೆ ಸೇರಿದಂತೆ ಅವಶೇಷಗಳು ಪತ್ತೆ

Suddi Udaya

ಸೆಂಟ್ ಲಾರೆನ್ಸ್ ಕಥೇಡ್ರಲ್ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ

Suddi Udaya

ಉಜಿರೆ: ಅಜಿತ್ ನಗರ ನಿವಾಸಿ ಶಂಕರನಾರಾಯಣ ಭಟ್ ನಿಧನ

Suddi Udaya

ಪೆರೋಡಿತ್ತಾಯಕಟ್ಟೆ ಸ.ಉ.ಪ್ರಾ. ಶಾಲೆಯಲ್ಲಿ ಮೆಟ್ರಿ ಕ್ ಮೇಳ

Suddi Udaya
error: Content is protected !!