37.6 C
ಪುತ್ತೂರು, ಬೆಳ್ತಂಗಡಿ
January 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡಂಗಡಿ ಸರ್ಕಾರಿ ಪ್ರೌಢ ಶಾಲಾ ನೂತನ ಕಟ್ಟಡ ಲೋಕಾರ್ಪಣೆ

ಪಡಂಗಡಿ : ಸರಕಾರಿ ಶಾಲೆಗಳು ಸಬಲೀಕರಣಗೊಳ್ಳಲು ಸರಕಾರದ ಇಚ್ಛಾಶಕ್ತಿ, ಕ್ರಿಯಾಯೋಜನೆಗಳು ಅತ್ಯಗತ್ಯ. ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಸರಕಾರಿ ಶಾಲೆಗಳನ್ನು ಬಲಪಡಿಸಬೇಕು. ಹಾಗೆಯೇ ಹೋಬಳಿಗೊಂದರಂತೆ ಸುಸಜ್ಜಿತ ಮಾದರಿ ಶಾಲೆಗಳನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಅನುವು ಮಾಡಿಕೊಡಬೇಕು. ಒಂದೇ ಸೂರಿನಲ್ಲಿ ಮಕ್ಕಳು ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರು ಸರ್ಕಾರಿ ಪ್ರೌಢ ಶಾಲೆ ಪಡಂಗಡಿ ಇಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕಟ್ಟಡವನ್ನು ಜ. 11 ರಂದು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ, ಪ್ರೌಢಶಾಲಾ ಶಿಕ್ಷಣ ಸಂಯೋಜಕಿ ಶ್ರೀಮತಿ ಚೇತನಾಕ್ಷಿ, ಪಡಂಗಡಿ ಸಿ. ಎ. ಬ್ಯಾಂಕ್ ಅಧ್ಯಕ್ಷ ಅಂತೋನಿ ಫರ್ನಾಂಡೀಸ್, ಅಶೋಕ್ ಗೋವಿಯಸ್, ಮಾಕ್ಸಿಂ ಸಿಕ್ಕೇರಾ, ಪೂರ್ವವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್, ಸಿ.ಎ. ಬ್ಯಾಂಕ್ ನಿರ್ದೇಶಕರು, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅನ್ನಮ್ಮ ವಿ ಎಂ. ಪ್ರಸ್ತಾವನೆಗೈದು; ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಶಶಿಕಲಾ ಧನ್ಯವಾದವರ್ಪಿಸಿ: ವಿಜ್ಞಾನ ಶಿಕ್ಷಕ ಶ್ರೀಶ ಭಟ್ ಕಾರ್ಯಕ್ರಮ ನಿರೂಪಣೆಗೈದರು.

Related posts

ರಸ್ತೆ ಬದಿಯಲ್ಲಿ ನಿಂತು ವಾಹನಗಳಿಗೆ ಕೈ ತೋರಿಸುವ ಮಕ್ಕಳು: ಪೋಷಕರ ಆತಂಕ

Suddi Udaya

ಬಳಂಜ:ಕಾರಣಿಕದ ಬೊಳ್ಳಜ್ಜ ಧ್ವನಿ ಸುರುಳಿ ಬಿಡುಗಡೆ

Suddi Udaya

ಲಾಯಿಲ ಮಹಾ ಶಕ್ತಿ ಕೇಂದ್ರದ ಕಡಿರುದ್ಯಾವರ ಗ್ರಾಮದಲ್ಲಿ ಯುವ ಚೌಪಾಲ್

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿನಿ ಕು.ಪವೀಕ್ಷ ರೈ ಗುಂಡೆಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Suddi Udaya

ಜೂ.10: ಸುಲ್ಕೇರಿ ಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರ ಕುಟೀರದ ಉದ್ಘಾಟನಾ ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಒಂದೇ ದಿನ 4300ರಷ್ಟು ಅವಲಕ್ಕಿ ಪಂಚಕಜ್ಜಾಯದ ಸೇವೆ

Suddi Udaya
error: Content is protected !!